ಇಂಡಿ

ಆಯುಷ್ಮಾನ್ ಭಾರತ್ ಯೋಜನೆಯ ಸದುಪಯೋಗ ಸಾರ್ವಜನಿಕರು ಪಡಿಸಿಕೊಳ್ಳಬೇಕು: ರಾಠೋಡ

ಆಯುಷ್ಮಾನ್ ಭಾರತ್ ಯೋಜನೆಯ ಸದುಪಯೋಗ ಸಾರ್ವಜನಿಕರು ಪಡಿಸಿಕೊಳ್ಳಬೇಕು:  ರಾಠೋಡ


ಇಂಡಿ: ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಕಾರ್ಡು ನೀಡಲು ಪುನರ್ ಪ್ರಾರಂಭ ಮಾಡಲಾಗಿದ್ದು ಸಾರ್ವಜನಿಕರು ಕಾರ್ಡಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಕೋಳೆಕರ್, ಆಯುಷ್ಮಾನ್ ಭಾರತ್ ಯೋಜನೆಯ ತಾಲೂಕಾ ನೋಡಲ್ ಅಧಿಕಾರಿ ಡಾ. ರಮೇಶ ರಾಠೋಡ ಹೇಳಿದರು. 

ಅವರು ಸೋಮವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯ ಕಾರ್ಡು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣಗಳಿಂದ ಆಯುಷ್ಮಾನ್ ಭಾರತ ಯೋಜನೆಯಡಿ ಕಾರ್ಡ ವಿತರಣೆ ಸ್ಥಗಿತಗೊಳಿಸಲಾಗಿತ್ತು. ಕೋವಿಡ್‌ಗಿಂತಲೂ ಮುಂಚೆ 20675 ಫಾಲಾನುಭವಿಗಳಿಗೆ ಕಾರ್ಡ ವಿತರಿಸಲಾಗಿದೆ ಎಂದರು. 

ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ದೇಶದ ಬಹುತೇಕ ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಈ ಕಾರ್ಡು ಬಳಸಬಹುದಾಗಿದೆ.  ಈ ಕಾರ್ಡ ಬಳಕೆ ಮಾಡುವುದರಿಂದ ಬಡ ಜನಾಂಗದವರಿಗೆ ಅನುಕೂಲವಾಗಲಿದೆ. ಬಿಪಿಎಲ್ ಕಾರ್ಡ ಹೊಂದಿದವರಿಗೆ 100 ಪ್ರತಿಶತ ಉಚಿತ ಚಿಕಿತ್ಸೆ ದೊರೆಯುತ್ತಿದ್ದು, ಎಪಿಎಲ್ ಕಾರ್ಡುದಾರರಿಗೆ 30 ಪ್ರತಿಶತ ಉಚಿತ ಚಿಕಿತ್ಸೆ ಸಿಗಲಿದೆ. ಆಸ್ಪತ್ರೆಯಲ್ಲಿ 10 ರೂ ಬ್ಲಾಕ್ ್ಘ ವೈಟ್ 30 ರೂ ಕಲರ್ ಪ್ರತಿ ನೀಡಲಾಗುತ್ತಿದೆ. ಹಣ ಕಟ್ಟಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ಹೆಚ್ಚಿನ ಹಣ ಕೇಳಿದರೆ ವೈದ್ಯಾಧಿಕಾರಿ ಅಥವಾ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದೆಂದು ತಿಳಿಸಿದರು. 

ಈ ಯೋಜನೆಯಡಿ ಆರೋಗ್ಯ ಮಿತ್ರನಾಗಿ ಶಿವಾಜಿ ಮಾನೆ, ಕಾರ್ಯ ನಿರ್ವಾಹಕರಾಗಿ ಪರಶುರಾಮ ದಶವಂತ, ಆರೋಗ್ಯಮಿತ್ರ ಸಹಾಯಕರಾಗಿ ಚಂದ್ರಾಮ ಮೇಡೇದಾರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಬಾಲಕೃಷ್ಣ ಸುಲಾಖೆ ಅವರಿಗೆ ಆಯುಷ್ಮಾನ್ ಭಾರತ್ ಕಾರ್ಡ ವಿತರಿಸಲಾಯಿತು. 

ಬಸವರಾಜ ಢವಳಗಿ, ಮಂಜುನಾಥ ಮಠ, ಮಲ್ಲಕಾರ್ಜುನ ಅರವತ್ತು, ಜಗದೀಶ ಭಿಸೆ ಮತ್ತಿತರರು ಇದ್ದರು. 



ಸುದ್ದಿ ಓದಿ