ರಾಣೆಬೆನ್ನೂರ

ಬಸವಾದಿ ಶಿವಶರಣರ ತತ್ವಗಳೇ ಆದರ್ಶ: ಚನ್ನಬಸವಶ್ರೀ

ಬಸವಾದಿ ಶಿವಶರಣರ ತತ್ವಗಳೇ ಆದರ್ಶ: ಚನ್ನಬಸವಶ್ರೀ

ರಾಣಿಬೆನ್ನೂರ 14: ಬಸವಾದಿ ಶಿವಶರಣರ ತತ್ವಗಳೇ ಆದರ್ಶ. ಶಿವಶರಣರ ತತ್ವಗಳ ಅಧ್ಯಯನದಿಂದ ಜೀವನ ಸಾರ್ಥಕ. ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಉಸಿರಾಗಿಸಿಕೊಂಡು ಬದುಕಿನುದ್ದಕ್ಕೂ ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಪ್ರವಚನಕ್ಕೆ ಹೆಚ್ಚು ಹೆಚ್ಚು ಜನರು ಭಾಗವಹಿಸಿದರೆ ಅದೇ ನಮಗೆ ಸಂತೃಪ್ತಿ ನೀಡಿದಂತಾಗುತ್ತದೆ ಎಂದು ಬಸವನಬಾಗೇವಾಡಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು. 

ಇಲ್ಲಿನ ಕೊಟ್ಟೂರೇಶ್ವರ ನಗರದ ಗುರು ಕೊಟ್ಟೂರೇಶ್ವರ ಮಠದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮದ ಅಂಗವಾಗಿ ಬಸವಾದಿ ಶರಣರ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ ಮತ್ತು ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುವದರ ಜೊತೆಗೆ ದಾರಿದ್ರ್ಯ ಮತ್ತು ಪಾಪಗಳಿಂದ ಮುಕ್ತರಾಗಲು ಸಾಧ್ಯ ಎಂದು ನುಡಿದರು.  

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್‌.ಕೋರಧಾನ್ಯಮಠ ಉದ್ಘಾಟಿಸಿ ಮಾತನಾಡಿ, ಪುರಾಣ ಪ್ರವಚನ ಆಲಿಸುವುದರಿಂದ ಧರ್ಮ, ಸಂಸ್ಕೃತಿ, ಮಹಾತ್ಮರ ಮತ್ತು ಶರಣ ತತ್ವ ಸಿದ್ದಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. 

ಚಡಚಣದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವನಾಥ ಕೋಡದ, ವಿಶ್ವನಾಥಯ್ಯ ಅಜ್ಜೋಡಿಮಠ,  ವಿರೇಶ ಚಿಕ್ಕಬುಳ್ಳಾಪುರ, ಮಹಾಂತೇಶ ಚಿಕ್ಕಮಠ, ಕಾರಟಗಿಯ ವೇ. ರಾಚಯ್ಯಶಾಸ್ತ್ರಿ, ಸತೀಶ ಅಜ್ಜೋಡಿಮಠ, ಬೇತೂರ ಈರ​‍್ಪ, ಅರವಿಂದ ಅಜ್ಜೋಡಿಮಠ, ಗೀರೀಶ ಮಾಗನೂರು, ಕೊಟ್ರೇಶ ಯಮ್ಮಿ, ಬಸಣ್ಣ ಕುರವತ್ತಿ, ಸತೀಶ ಅಜ್ಜೋಡಿಮಠ, ಚನ್ನಯ್ಯ, ಮಹೇಶ ಶೆಟ್ರ,  ಕೊಟ್ರೇಶ ಕೆಂಚಪ್ಪನವರ, ಪರಮೇಶ್ವರ ಯಡಿಯಾಪುರ, ಶಾಂತಯ್ಯ ಕೊಟ್ನಿಕಲ್ಮಠ, ಬಿದ್ದಾಡೆಪ್ಪ ಚಕ್ರಸಾಲಿ, ಬಸಣ್ಣ ನಂದೀಹಳ್ಳಿ, ಅರವಿಂದ ಅಜ್ಜೋಡಿಮಠ  ಇದ್ದರು. ನಂತರ ಪ್ರಸಾದ ವಿತರಣೆ ನಡೆಯಿತು. 


ಸುದ್ದಿ ಓದಿ