ಮತ್ತೆ ಪುಟಿದೇಳುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ: ಮ್ಯಾಗೇರಿ
ಶಿಗ್ಗಾವಿ 20: ಹೋರಾಟ ಮತ್ತು ಸಂಘಟನೆಗೆ ಹೆಚ್ಚಿನ ಒತ್ತುಕೊಟ್ಟು ಮತ್ತೆ ಪುಟಿದೇಳುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿ ಇದೆ ಬಿಜೆಪಿಗೆ ಹೋರಾಟ ಹೊಸತೇನಲ್ಲ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ನವರು ಗ್ಯಾರಂಟಿಕಾರ್ಡ್ ತೋರಿಸಿ ಜನರನ್ನು ಯಾಮರಿಸಿ ಅಧಿಕಾರ ಕುದುರಿಸಿಕೊಂಡರೆ ಜನಮನಗೆದ್ದಂಗ ಅಲ್ಲ ಗ್ಯಾರಂಟಿ ಕಾರ್ಡ್ ಮುಖಾಂತರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಎಲ್ಲವನ್ನು ಈಡೇರಿಸಿದಾಗ ನಿಜವಾಗಿ ಗೆದ್ದ ಹಾಗೆ ನಾವು ವಿರೋಧ ಪಕ್ಷದಲ್ಲಿದ್ದು ಜನ ಸೇವೆ ಮಾಡುತ್ತೇವೆ ನಾಡು ನೆಲ ಜಲ ಉಳಿವಿಗಾಗಿ ಹೋರಾಡುತ್ತೇವೆ ನಾಡಿನ ಜನರ ಮನಸ್ಸುಗೆಲ್ಲುತ್ತೇವೆ ಕಾಂಗ್ರೆಸನವರು ಘೋಷಿಸಿದ ಗ್ಯಾರಂಟಿ ಗಳಿಗೆ ಜನರೇ ಉತ್ತರ ಕೊಡುತ್ತಾರೆ ಅದರ ಬಗ್ಗೆ ನಾವು ಮಾತನಾಡುವುದಿಲ್ಲ ನುಡಿದಂತೆ ನಡೆಯದಿದ್ದರೆ ನಡೆವ ದಾರಿಯಲ್ಲಿಯೇ ಜನರು ತಡೆದು ಮುಂಗೈ ಹಿಡಿದು ಕೇಳುವಷ್ಟು ನಮಗೆ ತಾಕತ್ತಿದೆ ಎಂದು ಜನರೇ ಮಾತನಾಡುತ್ತಿದ್ದಾರೆ ಎಂದರು.
ನಾವೇನು ಉಚಿತವಾಗಿ ಪ್ರತಿಯೊಬ್ಬರಿಗೂ ಎರಡು ನೂರುಯೂನಿಟ್ ವಿದ್ಯುತ್ ಉಚಿತ ಬಸ್ ಪಾಸ್ ಮನೆ ಮುಖ್ಯಸ್ಥರಿಗೆ 2000 ಪದವೀಧರರಿಗೆ 3000 ಕೊಡಿರಿ ಎಂದು ನಾವೇನು ಕೇಳಿದ್ದಿಲ್ಲ ಕಾಂಗ್ರೆಸನವರೇ ನಮ್ಮ ಮನೆಗೆ ಬಂದು ಗ್ಯಾರಂಟಿ ಕಾರ್ಡನ್ನು ಕೊಟ್ಟು ನೀವು ನಮಗೆ ಮತ ಹಾಕಿ ಇವೆಲ್ಲವುಗಳನ್ನು ನಿಮ್ಮ ಮನೆಗೆ ಪ್ರತಿ ತಿಂಗಳ ಮುಟ್ಟಿಸುತ್ತೇವೆ ಎಂದಿದ್ದೀರಿ ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೇವೆ ನಾವೆಲ್ಲರೂ ನಿಮಗೆ ವೋಟು ಕೊಟ್ಟಿದ್ದೇವೆ ನಿಮಗೆ ಸರಕಾರ ನಡೆಸಲು ಬಿಟ್ಟಿದ್ದೇವೆ ಜೂನ್ ತಿಂಗಳಿಂದ ಕೊಟ್ಟಗ್ಯಾರಂಟಿ ಉಳಿಸಿಕೊಳ್ಳತ್ತೀರೆಂಬ ಭರವಸೆ ಇಟ್ಟಿದ್ದೇವೆ ಎಂದು ನಾಡಿನಾದ್ಯಂತಜನರೇ ಮಾತನಾಡುತ್ತಿರುವುದನ್ನು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಅದು ಕಾಂಗ್ರೆಸ್ ಸರ್ಕಾರಕ್ಕೆ ಬಿಟ್ಟ ವಿಚಾರ ನಾವಂತೂ ನಿರಂತರ ಸಂಘಟನೆ ಹಾಗೂ ಜನಸೇವೆಯೊಂದಿಗೆ ನ್ಯಾಯದ ಪರವಾಗಿ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಿದ್ದೇವೆ ಅಭಿವೃದ್ಧಿಯೊಂದಿಗೆ ಅಖಂಡ ಭಾರತಕಟ್ಟಲು ಸಂಕಲ್ಪ ಮಾಡಿದ್ದೇವೆ ಎಂದರು.