ಇಂಡಿ

ಪ್ರತಿಯೊಬ್ಬರಿಗೂ ಸರಿಯಾದ ದಾರಿ ತೋರಿಸುವ ವ್ಯಕ್ತಿ ಗುರು: ಭಾರತಿ ವಾಲಿ

ಪ್ರತಿಯೊಬ್ಬರಿಗೂ ಸರಿಯಾದ ದಾರಿ ತೋರಿಸುವ ವ್ಯಕ್ತಿ ಗುರು: ಭಾರತಿ ವಾಲಿ

ಇಂಡಿ 23: ಗುರು ಪ್ರತಿಯೊಬ್ಬರಿಗೂ ಸರಿಯಾದ ದಾರಿ ತೋರಿಸುವ ವ್ಯಕ್ತಿ. ಗುರುಗಳು ತಮ್ಮ ಪಾಠ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನು ನಿರಂತರವಾಗಿ ಬೆಳಗಿಸುವ ವ್ಯಕ್ತಿಯಾಗಿದ್ದಾನೆ. ಗುರು ಓರ್ವ ವ್ಯಕ್ತಿಗೆ ಸದಾಚಾರದ ಮಾರ್ಗವನ್ನು ಅನುಸರಿಸಲು ಯಾವಾಗಲೂ ಪ್ರೋತ್ಸಾಹಿಸುತ್ತಾನೆ ಹಾಗೂ ಜೀವನದ ಪ್ರತಿಯೊಂದು ಪಾಠವನ್ನು ನಮಗೆ ಕಲಿಸುತ್ತಾನೆ. ಗುರು ಇಲ್ಲದೆ ನಮ್ಮ ದಾರಿಯಲ್ಲಿ ಬರುವ ಕತ್ತಲೆಯನ್ನು ಹೋಗಲಾಡಿಸುವುದು ಕಷ್ಟ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವಿಜಯಪೂರ ಜಿಲ್ಲಾ ಅಧ್ಯಕ್ಷ ಭಾರತಿ ವಾಲಿ ಹೇಳಿದರು. 

ಅಖಿಲ ಭಾರತ ಜನವಾದಿ ಮಹಿಳಾ ಸಂಘ ಹಾಗೂ ವಿವೇಕ ಜಾಗೃತ ಬಳಗ ಇಂಡಿ ಇವರ ಸಹಯೋಗದಲ್ಲಿ ರವಿವಾರ ಸಂಜೆ ಇಂಡಿ ನಗರದ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಲ್ಲಯ್ಯ ಸ್ವಾಮಿ ಹಿರೇಮಠ ಅವರು ಗುರು ಉತ್ತಮ ಮನುಷ್ಯರಾಗಲು ನಮಗೆ ಸಹಾಯ ಮಾಡುತ್ತಾರೆ ಮತ್ತು ಮಾನವೀಯತೆಯ ಬಗ್ಗೆ ನಮಗೆ ಜ್ಞಾನವನ್ನು ನೀಡುತ್ತಾರೆ. ಕೆಲವೊಮ್ಮೆ ಅವರು ಆಧ್ಯಾತ್ಮಿಕ ಗುರು, ನಮ್ಮ ಜೀವನವನ್ನು ಅತ್ಯಂತ ಆಳವಾದ ಆಧ್ಯಾತ್ಮಿಕ ತಿಳುವಳಿಕೆಯೊಂದಿಗೆ ಬೆಳಗಿಸುತ್ತಾರೆ. ಒಳ್ಳೆಯ ಜೀವನ ನಡೆಸಲು ಗುರು ಬೇಕು. ಆದ್ದರಿಂದ ಈ ದಿನ ನಿಮ್ಮ ತಾಯಿ ಮತ್ತು ತಂದೆಯಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳಿ ಎಂದು ಹೇಳಿದರು 

ಕಲ್ಲಯ್ಯ ಸ್ವಾಮಿ, ಭಾರತಿ ವಾಲಿ ಹಾಗೂ ಎಸ್ ಜಿ ಮರಗೂರ, ದ್ರಾಕ್ಷಾಯಿಣಿ ಮೈದ್ದರಗಿ ಇವರನ್ನು ಸನ್ಮಾನಿಸಲಾಯಿತು.  

ಮಾದೇವಿ ಮಠಪತಿ, ನೀಲಮ್ಮ ಮದರಿ, ಜಯಶ್ರೀ ಪತ್ತಾರ, ಉಮಾ ಪಟ್ಟದಕಲ್ಲಿ, ವಿದ್ಯಾಶ್ರೀ ಪಾಟೀಲ, ಉಮಾ ಹಿರೇಮಠ, ಅನ್ನಪೂರ್ಣ ಲಾಳಗಿ, ಹಾಗೂ ವಿವೇಕ ಜಾಗೃತ ಬಳಗದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ