ಗುಳೇಗುಡ್ಡ

ಕಾಟಾಚಾರದ ಕೆಲಸ : ಸಾರ್ವಜನಿಕರ ಆಕ್ರೋುುಶ

ಕಾಟಾಚಾರದ ಕೆಲಸ : ಸಾರ್ವಜನಿಕರ ಆಕ್ರೋುುಶ
ಗುಳೇದಗುಡ್ಡದ ಹಳೆ ಮಾರ್ಕೇಟ್ ದಲ್ಲಿ ಕಾಟಾಚಾರಕ್ಕೆ ನೀರು ತೆಗೆಯುತ್ತಿರುವ ಪುರಸಭೆ ಸಿಬ್ಬಂದಿ

ಗುಳೇದಗುಡ್ಡ 04: ಪಟ್ಟಣದ ಹಳೆಮಾರುಕಟ್ಟೆಗೆ ಹೋಗುವ ರಸ್ತೆ ಮೇಲೆ ಸದಾ ನೀರು ನಿಂತು ಮಲೀನವಾಗಿ ನಡೆದಾಡುವವರಿಗೆ ಹಾಗೂ ಮಾರ್ಕೆಟ್‌ದಲ್ಲಿ ಕುಳಿತು ವ್ಯಾಪಾರ ಮಾಡುವ ತರಕಾರಿ ವ್ಯಾಪಾರಸ್ತರಿಗೆ ತೊಂದರೆಯಾಗುತ್ತಿದೆ. ಅದನ್ನು ಸರಿಪಡಿಸಲು ಗುರುವಾರ ಲೋಕದರ್ಶನ ವರದಿ ಮಾಡಿದ ಹಿನ್ನೆಲೆಯಲ್ಲಿ ಪುರಸಭೆ ತ್ವರಿತಗತಿಯಲ್ಲಿ ಅಲ್ಲಿ ನಿಂತ ನೀರನ್ನು ತೆಗೆಯಲು ಮುಂದಾಗಿದೆಯೇ ವಿನ: ಶಾಶ್ವತ ಪರಿಹಾರ ಮಾಡುತ್ತಿವೆಂದು ಇಲ್ಲಿನ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾರುಕಟ್ಟೆಯ ಕಾಂಪ್ಲೇಕ್ಸ್‌ದಲ್ಲರುವ ವ್ಯಾಪಾರಸ್ಥರು ಮತ್ತು ಮಾರ್ಕೇಟ್‌ದಲ್ಲಿ ತರಕಾರಿ ಮಾರಾಟ ಮಾಡುವ ವ್ಯಪಾರಸ್ತರು ಪತ್ರಿಕೆಯೊಂದಿಗೆ ಮಾತನಾಡಿ, ನೀರು ನಿಂತು ಪಟ್ಟಣದ ಕಾಲೇಜು ಸರ್ಕಲ್‌ಗೆ ಹತ್ತಿರವಿರುವ ಹಳೆಮಾರ್ಕೇಟ್‌ಗೆ ಬಂದರೆ ಅಲ್ಲಿ ಸದಾ ನೀರು ನಿಲ್ಲುವ ವಿಶಾಲವಾದ ತಗ್ಗಾದ ಸ್ಥಳವಿದೆ. ಅದನ್ನು ದಾಟಿ ಮಾರ್ಕೇಟ್‌ಗೆ ಜನ ಹೋಗಬೇಕು. ಆ ನೀರು ಯಾವತ್ತೂ ನಿಂತು ರೋಗಾಣು ಉತ್ಪಾದಿಸುತ್ತಿದೆ. ಅದರಿಂದ ಸಾರ್ವಜನಿಕರುಗೆ ಹಾಗೂ ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ನಿತ್ಯ ರೋಗ ಭೀತಿ ಕಾಡುತ್ತಿದೆ ಎಂದು ಅಲ್ಲಿನ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪುರಸಭೆಗೆ ಮನವಿ ಮಾಡಿಕೊಂಡಿತ್ತು. ಆದರೆ ಪುರಸಭೆಯವರು ಗುರುವಾರ ನಿಂತ ನೀರನ್ನು ಯಂತ್ರದಿಂದ ತೆಗೆಯಲು ಮುಂದಾಗಿದೆಯೇ ವಿನ: ಗರಸು ಮಣ್ಣು ತುಂಬಿ ಶಾಶ್ವತ ಪರಿಹಾರ ಮಾಡಲಿಲ್ಲ. ಮಳೆಗಾಲವಾಗಿದ್ದರಿಂದ ನಿತ್ಯ ಆ ಸ್ಥಳದಲ್ಲಿ ನೀರು ನಿಂತು ಸಾರ್ವಜನಿಕರಿಗೆ ಅನಾನುಕೂಲವಾದರೂ ಪುರಸಭೆ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕರಣವಾಗಿದೆ ಎಂದು ಅಲ್ಲಿನ ಜನ ಹೇಳುತ್ತಾರೆ. 

ಮಳೆಯ ನೀರು, ತೆರೆದ ಗಟಾರದಿಂದ ಹರಿದು ಬಂದ ನೀರು ಅಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರು ಹರಿದುಹೋಗದೇ ತಗ್ಗಾದ ಆ ಸ್ಥಳದಲ್ಲಿ ಹಸಿರುಗಟ್ಟಿ ನಿಂತು ಕೆಟ್ಟ ವಾಸನೆ ಹಾಗೂ ರೋಗಾಣುಗಳಂದ ತೊಂದರೆಯಾಗುತ್ತಿದೆ.  ಗರಸು ಮಣ್ಣು ಹಾಕಿ ಇದನ್ನು ಸಮತಟ್ಟಾಗಿ ಮಾಡಿದರೆ ಸಾಕು ಅಲ್ಲಿ ನೀರು ನಿಲ್ಲುವುದಿಲ್ಲ. ಆದರೆ ಪುರಸಭೆಗೆ ಇದನ್ನು ಮನವರಿಕೆ ಮಾಡಿದರೂ ಕಾಟಾಚಾರದ ಕೆಲಸ ಮಾಡಿಸಿ, ವೃಥಾ ಕಾಲಹರಣ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ನಿತ್ಯ ಮಳೆ ಆಗುತ್ತಿದ್ದೂ ಆ ತಗ್ಗಾದ ಸ್ಥಳ ಮತ್ತೇ ನೀರು ಸಂಗ್ರಹದ ಗುಂಡಿಯಾಗಿ ಪರಿಣಮಿಸಿದೆ. ಲಾಕ್‌ಡೌನ್ ಸಂದರ್ಭವಾಗಿರುವುದರಿಂದ ಬೆಳಿಗ್ಗೆ ಜನ ವ್ಯಾಪಾರಕ್ಕೆ ಈ ನೀರಿನಲ್ಲಿಯೇ ಅಡ್ಡಾಡುವ ಪರಿಸ್ಥಿತಿ ಬಂದಿದೆ. ಮಕ್ಕಳು, ವೃದ್ಧರು ಗಬ್ಬು ವಾಸನೆ ಹರಡುತ್ತಿರುವ ನೀರಿನಲ್ಲಿಯೇ ಅಡ್ಡಾಡಬೇಕು. ಬೈಕ್ ಸವಾರರು ಬಂದರೆ ಸಾಕು ಅಕ್ಕಪಕ್ಕದ ಜನರಿಗೆ ಮಲೀನ ನೀರು ಸಿಡಿದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಹಳೆ ಮಾರ್ಕೇಟ್ ತಗ್ಗು ಸ್ಥಳದ ದುರಸ್ತಿಗೆ, ಅಲ್ಲಿನ ಸ್ವಚ್ಚತೆಗೆ ಪುರಸಭೆ ಕ್ರಮಕೈಗೊಳ್ಳಬೇಕಿದೆ. ನೀರು ನಿಲ್ಲದಂತೆ ಕ್ರಮವಹಿಸಿದರೆ ಸಾಂಕ್ರಾಮಿಕ ರೋಗ ಹರಡುವುದನ್ನು ಪುರಸಭೆ ತಪ್ಪಿಸಿದಂತಾಗುತ್ತದೆ. ಆದಷ್ಟು ಬೇಗ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಹಾಗೂ ಅಲ್ಲಿನ ವ್ಯಾಪಾರಸ್ಥರು ಪುರಸಭೆ ಮುಖ್ಯಧಿಕಾರಿಗಳು ಹಾಗೂ ಪುರಸಭೆ ಅಧ್ಯಕ್ಷರು ಈ ರೋಗ ಹರಡುವ ಸ್ಥಳವನ್ನು ಆದಷ್ಟು ಬೇಗ ದುರಸ್ತಿ ಮಾಡಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.  

  

ಸುದ್ದಿ ಓದಿ