ಎಸ್ ಬಿಐ ಯಾನೋ ಮೂಲಕ ಐಟಿಆರ್ ಫೈಲ್ ಮಾಡಲು ಅವಕಾಶ
ಮುಂಬೈ
, ಡಿಸೆಂಬರ್ 30: ದೇಶದ ಅತಿದೊಡ್ಡ ಬ್ಯಾಂಕ್ ಆದ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ತೆರಿಗೆ ಪಾವತಿದಾರರಿಗೆ ಹೊಸ ಸೇವೆ ಪರಿಚಯಿಸಲಾಗಿದ್ದು ಬ್ಯಾಂಕಿನ ಯಾನೋ ಅಪ್ಲಿಕೇಷನ್
ಮೂಲಕ ಐಟಿಆರ್ ಫೈಲ್ ಮಾಡಬಹುದಾಗಿದೆ.
ಆರ್ಥಿಕ
ವರ್ಷ 2019- 20 ಅಥವಾ ಅಸೆಸ್ ಮೆಂಟ್ ವರ್ಷ 2020- 21ಕ್ಕೆ ಐಟಿಆರ್ ಫೈಲ್ ಮಾಡುವುದಕ್ಕೆ ಗಡುವು ಇದೇ ನಾಳೆ ಗುರುವಾರ
ಕೊನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ನೀಡಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ.
ಆದ್ದರಿಂದ ಎಸ್ ಬಿಐ ಗ್ರಾಹಕರಾಗಿದ್ದು, ಯಾರು ಈ ತನಕ ಐಟಿಆರ್ ಫೈಲ್ ಮಾಡಿಲ್ಲವೋ ಅಂಥವರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಯಾನೋ ಅಪ್ಲಿಕೇಷನ್ ನ ಮೂಲಕ ಆದಾಯ ತೆರಿಗೆ ರಿಟರ್ನ್ ಉಚಿತವಾಗಿ ಫೈಲ್ ಮಾಡಬಹುದು ಎಂದೂ ಎಸ್ ಬಿಐ ಟ್ವೀಟ್ ಮಾಡಿದೆ.
ಒಂದು ವೇಳೆ ಚಾರ್ಟರ್ಡ್ ಅಕೌಂಟೆಂಟ್ ಗಳ ನೆರವು ಬೇಕಿದ್ದಲ್ಲಿ ಅದಕ್ಕೆ ಕನಿಷ್ಠ 199 ರುಪಾಯಿ ಪಾವತಿಸಬೇಕಾಗುತ್ತದೆ ಎಂದೂ ಬ್ಯಾಂಕ್ ಹೇಳಿದೆ.