ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗುರ್ಪ
ಸಿರುಗುಪ್ಪ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯ ಕ್ಷೇತ್ರ ಸಾರ್ವಜನಿಕ ಶಿಕ್ಷಣ ಅಧಿಕಾರಿಯಾಗಿ ಊ. ಗುರ್ಪ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು ಸರ್ಕಾರದ ಶಿಕ್ಷಣ ಇಲಾಖೆಯ ಆದೇಶದಂತೆ ಇದುವರೆಗೂ ಸಿರುಗುಪ್ಪ ತಾಲೂಕಿನ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಇಓಪಿಡಿ ಭಜಂತ್ರಿ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಇವರ ಸ್ಥಳಕ್ಕೆ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್. ಗುರ್ಪ ಇವರನ್ನು ನೂತನ ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ ಗುರ್ಪ ಇವರು ಸಿರುಗುಪ್ಪ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರ ಹಸ್ತಾಂತರ ಮಾಡಿಕೊಂಡು ಕರ್ತವ್ಯನಿರ್ವಹಿಸಿದರು ಮೂಲತಃ ಕನಕಗಿರಿ ತಾಲೂಕಿನವರಾದ ಇವರು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸಿರುಗುಪ್ಪ ಶಿಕ್ಷಣಾದಿಕಾರಿ ಕಚೇರಿಯಲ್ಲಿಯೂ ಕಳೆದ 2013 ರಿಂದ 2015ರ ವರೆಗೂ ಸೇವೆ ಸಲ್ಲಿಸಿದ್ದರು. ಇದೀಗ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿರುಗುಪ್ಪ ತಾಲೂಕಿಗೆ ಸರ್ಕಾರ ನೇಮಕಾತಿ ನೀಡಿದೆ.ನಗರದ ಬಿಇಓ ಕಚೇರಿಗೆ ಆಗಮಿಸುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಿಂಗರಾಜು, ಅರುಣಾ ಪ್ರತಾಪ ರೆಡ್ಡಿ, ಹನುಮಂತರೆಡ್ಡಿ, ಕ್ಷೇತ್ರ ಸಂಪನ್ಮೂಲ ಶಿಕ್ಷಣ ಸಮನ್ವಯಾಧಿಕಾರಿ ತಮ್ಮಣ್ಣ ಗೌಡ ಪಾಟೀಲ್, ಜಿಲ್ಲಾ ಸಾಕ್ಷರತಾ ಸಮಿತಿಯ ಸದಸ್ಯ ಅಬ್ದುಲ್ ನಬಿ, ಕಚೇರಿಯ ಸಿಬ್ಬಂದಿಗಳು, ಬಿ ಆರ್ ಸಿಗಳು ಸಿಆರಿ್ಪಗಳು ಮತ್ತು ಅನೇಕ ಶಿಕ್ಷಕರು ಹಾಗೂ ಇತರರು ಆಗಮಿಸಿ ಅವರಿಗೆ ಶುಭಾಶಯ ಕೋರಿದರು.