ಗುಳೇಗುಡ್ಡ

ಪರಿಸರ ಸ್ವಚ್ಚತೆ ಅಗತ್ಯ : ತಹಸೀಲ್ದಾರ ಕುಲಕರ್ಣಿ

ಪರಿಸರ ಸ್ವಚ್ಚತೆ ಅಗತ್ಯ : ತಹಸೀಲ್ದಾರ ಕುಲಕರ್ಣಿ
ಗುಳೇದಗುಡ್ಡ ತಹಸೀಲ್ದಾರ ಜಿ.ಎಂ.ಕುಲಕರ್ಣಿ ಮಾತನಾಡಿದರು.

ಗುಳೇದಗುಡ್ಡ25: ನಾವು ವಾಸಿಸುತ್ತಿರುವ ಮನೆ ಹಾಗೂ ಸುತ್ತ ಮುತ್ತಲಿನ ಪರಿಸರ ಸ್ವಚ್ಚವಾಗಿಡುವ ಮೂಲಕ ರೋಗ ರುಜೀನಗಳು ಹರಡದಂತೆ ಮುಂಜಾಗ್ರತೆವಹಿಸಬೇಕೆಂದು ತಹಸೀಲ್ದಾರ ಜಿ.ಎಂ.ಕುಲಕರ್ಣಿ ಹೇಳಿದರು.

ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿಗಳು ಗುಳೇದಗುಡ್ಡ ಹಾಗೂ  ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡೇಂಗಿ ವಿರೋಧಿ ಮಾಸಾಚರಣೆ ಆಗಷ್ಟ್-2021 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಹಲವಾರು ಜಾತಿಯ ಸೊಳ್ಳೆಗಳಿಂದ ಡೇಂಗು, ಚಿಕನ್‍ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರದಂತಹ ರೋಗಗಳು ಉಲ್ಬಣವಾಗಲು ಕಾರಣವಾಗುತ್ತವೆ ಆದಕಾರಣ ಸಾರ್ವಜನಿಕರೆಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡಲು ಜಾಗೃತಿ ಮೂಡಿಸಿ ರೋಗಗಳು ಬರದ ಹಾಗೆ ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು. 

ಡೇಂಗಿ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಸಂಚಾಲಕ ಆರ್.ಎಮ್.ಸಾಳಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೊಳ್ಳೆಗಳ ಜೀವಿತಾವಧಿ ಕೇವಲ 30 ದಿನ ಮಾತ್ರ. ಆದರೆ ಅವು ನಾಲ್ಕು ಬಾರಿ ಮೊಟ್ಟೆ ಇಡುತ್ತವೆ. ಒಂದು ಸಾರಿ 150 ಮರಿ ಹಾಕುತ್ತವೆ. ಹೀಗಾಗಿ ನಿಮ್ಮ ಸುತ್ತ ಮುತ್ತ ತ್ಯಾಜ್ಯ ವಿಲೇವಾರಿ, ಮಳೆ ನೀರು ನಿಲ್ಲದ ಹಾಗೇ ನೋಡಿಕೊಳ್ಳುವುದು, ಕಸದರಾಶಿ ಮತ್ತು ಗಲೀಜು ಆಗದ ಹಾಗೆ ನೋಡಿಕೋಳ್ಳಬೇಕೇಂದು ಹೇಳಿದರು.

ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪಿ.ಆಯ್.ಮೋಮಿನ, ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೊಚಕಿ ಜಯಶ್ರೀ ಕಳಸಾ,  ಸೌಮ್ಯ ನಂದಿಕೋಲಮಠ,  ಬಿ.ಎ.ನದಾಫ್,  ಕಂಠಿಗೌಡ್ರ, ಎಸ್.ಟಿ.ಕಟ್ಟಿ, ಡಾ.ಎಚ್.ಎಸ್.ಘಂಟಿ ಉಪಸ್ಥಿತರಿದ್ದರು.

ಸುದ್ದಿ ಓದಿ