ಇಂಡಿ

ಮಾನವನ ವಿಕಾಸಕ್ಕೆ ಮಾತೃಭಾಷೆ ಅತ್ಯಗತ್ಯ: ಸಂತೋಷ ಬಂಡೆ

ಮಾನವನ ವಿಕಾಸಕ್ಕೆ ಮಾತೃಭಾಷೆ ಅತ್ಯಗತ್ಯ: ಸಂತೋಷ ಬಂಡೆ

ಇಂಡಿ21: ಭಾಷೆಯು ಮನುಷ್ಯನ ಭಾವಾಭಿವ್ಯಕ್ತಿಯ ಅತಿ ಮುಖ್ಯ ಮಾಧ್ಯಮ. ಮಾನವನ ವಿಕಾಸ ಕಾಲದಿಂದ ವಿಶ್ವದಲ್ಲಿ ಸಾವಿರಾರು ಭಾಷೆಗಳು ಬೆಳೆದು ಬಂದಿವೆ. ಆರಂಭದಲ್ಲಿ ಶೈಶವಾವಸ್ಥೆಯಲ್ಲಿದ್ದ ಭಾಷೆಗಳು ತಮ್ಮಲ್ಲಿನ ಶಬ್ದ ಭಂಡಾರವನ್ನು ಹೆಚ್ಚಿಸಿಕೊಳ್ಳುತ್ತ ಪರಿಪೂರ್ಣವಾಗಿ ಬೆಳೆದಿದ್ದು ವಿಶೇಷವಾಗಿದೆ ಎಂದು ಹಿರೇರೂಗಿಯ ಯುಬಿಎಸ್ ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.        

   ಅವರು ಇಂದು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲೂಟಗಿ ಎಚ್ ಕೆ ಯಲ್ಲಿ ಜರುಗಿದ ವಿಶ್ವ ಮಾತೃಭಾಷಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.         

   ವಿಶ್ವದಲ್ಲಿ ಸುಮಾರು 6 ಸಾವಿರ ಭಾಷೆಗಳನ್ನು ಮಾತನಾಡಲಾಗುತ್ತದೆ. ಆದರೆ, ಇದರಲ್ಲಿ ಶೇ 43ಕ್ಕೂ ಹೆಚ್ಚು ಭಾಷೆಗಳು ಅವಸಾನದಂಚಿನಲ್ಲಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಪ್ರತಿ ಎರಡು ವಾರಕ್ಕೊಂದು ಭಾಷೆ ವಿಶ್ವದಿಂದ ಕಣ್ಮರೆಯಾಗುತ್ತಿರುವದು ಶೋಚನೀಯ ಎಂದು ಹೇಳಿದರು.         

  ಬಿಆರ​‍್ಿ ಅಧಿಕಾರಿಗಳಾದ ಬಸವರಾಜ ಗೋರನಾಳ ಮಾತನಾಡಿ,ಭಾಷೆಯೊಂದು ಅವಸಾನವಾದರೆ ಅದರ ಜೊತೆಗೆ ಆ ಭಾಷೆಯ ಸಂಸ್ಕೃತಿ ಹಾಗೂ ಜ್ಞಾನ ಸಂಪ್ರದಾಯವೂ ಹಾಳಾದಂತೆ. ಅದಕ್ಕಾಗಿಯೇ ಎಲ್ಲ ಭಾಷೆಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.        

ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ಡಿ ಎನ್ ಹಿರೇಮಠ ಮಾತನಾಡಿ,ಭಾಷೆ ಹಾಗೂ ಬಹುಭಾಷೆಗಳ ಬಳಕೆಯಿಂದ ಪ್ರತಿಯೊಬ್ಬರ ಸುಸ್ಥಿರ ಅಭಿವೃದ್ಧಿ ಮತ್ತು ಅಭಿವೃದ್ಧಿಯಲ್ಲಿ ಕ್ರಿಯಾಶೀಲವಾಗಿ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುವಿಕೆಯ ಅಭಿವ್ಯಕ್ತಿಯಾಗಿ ವಿಶ್ವ ಮಾತೃಭಾಷಾ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.      

   ಶಿಕ್ಷಕ ಬಿ ಎಂ ಅರಳಗುಂಡಗಿ, ಆರ್ ಎನ್ ಹೋಟಗೊಂಡ, ಡಿ ಕೆ ಹಂಜಗಿ, ಎ ಎಲ್ ನಾರಾಯಣಕರ, ಪಿ ಆಯ್ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ