ಇಂಡಿ

ಅಬಕಾರಿ ಅಧಿಕಾರಿಗಳಿಂದ ಗಾಂಜಾ ವಶ

ಅಬಕಾರಿ ಅಧಿಕಾರಿಗಳಿಂದ ಗಾಂಜಾ ವಶ


ಇಂಡಿ: ತಾಲೂಕಿನ ಗೋಳಸಾರ ಗ್ರಾಮದಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ 11 ಕೆಜಿ ಗಾಂಜಾ ವಶಪಡಿಸಿಕೊಂಡು ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಬುಧವಾರ ಸಾಯಂಕಾಲ ನಡೆದಿದೆ. 

ಬಂಧಿತ ವ್ಯಕ್ತಿಯನ್ನು ಚಂದ್ರಾಮ ಭೀಮಣ್ಣ ಬಡದಾಳ ಎಂದು ಗುರುತಿಸಲಾಗಿದೆ. ಆರೋಪಿತನ ತೋಟದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಸಿಹಿಟ್ಟಿದ್ದ 11 ಕೆಜಿ ಒಣಗಿದ ಗಾಂಜಾವನ್ನು ಅಂದಾಜು ಮೊತ್ತ 2.20.000/- ಇದ್ದು ಈ ಪ್ರಕರಣ ಅಬಕಾರಿ ಉಪ ನಿರಿಕ್ಷಕರಾದ ಪರೀನಾ ವನಕ್ಯಾಳ ಇಂಡಿ ವಲಯ ಇವರು, ಎನ್‌.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದೆವರಿಸಿದ್ದಾರೆ ಎಂದು ಇಂಡಿ ವಲಯ ಅಬಕಾರಿ ನೀರೀಕ್ಷರಾದ ಎಂ ಎಚ್ ಪಡಲಸಗಿ ತಿಳಿಸಿದ್ದಾರೆ. 


ಸುದ್ದಿ ಓದಿ