ಮಹಾದಾನಿಗಳನ್ನು ನೆನೆಯುವುದೇ ನಮ್ಮೆಲ್ಲರ ಬಾಳಿನ ಬೆಳಕು
ಧಾರವಾಡದ,29: ಮಹಾದಾನಿಗಳಾದ ಶಿಕ್ಷಣ ಪ್ರೇಮಿ , ಕೊಡುಗೈ ದೊರೆ ವಂಟಮುರಿ ಸಂಸ್ಥಾಪಕ ಒಡೆಯರಾದ ಲಿಂಗೈಕ್ಯ ರಾಜಾ ಲಖಮಗೌಡ್ರು ಸಮಾಜ ಮುಖಿಯಾಗಿ ಬದುಕಿ ಬಾಳಿದವರು ಬಡವರ ಉದ್ದಾರಕ್ಕೆ ಶ್ರಮಿಸಿದವರು ಅನಕ್ಷರತೆಯನ್ನು ತೊಲಗಿಸಲು ಏ ಐ ಇ ಸಂಸ್ಥೆ ಹಾಗೂ ಹಲವಾರು ಸಂಘ ಸಂಸ್ಥೆಗಳಿಗೆ ಉದಾರ ದಾನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದರು. ಇಂತಹ ಮಹಾದಾನಿಗಳನ್ನು ನೆನೆಯುವುದೇ ನಮ್ಮೆಲ್ಲರ ಬಾಳಿನ ಬೆಳಕು ಎಂದು ಡಾ. ಲಿಂಗರಾಜ. ಸಿ. ಮುಳ್ಳಳ್ಳಿಯವರ ಹೇಳಿದರು.
ಧಾರವಾಡದ ಕೆ. ಎಲ್. ಇ ಸಂಸ್ಥೆಯ ಆರ್.ಎಲ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜು.29 2024 ರಂದು ಜರುಗಿದ 161 ನೇ ರಾಜಾ ಲಖಮ ಗೌಡ್ರ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಲ್ಲೊಂಡು ಮಾತನಾಡುತ್ತ ಉದಾತ್ತ ಮೌಲ್ಯಗಳನ್ನು ದಾನ ಪರಂಪರೆಯ ಮೌಲ್ಯವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ನುಡಿದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಚಿಕ್ಕೋಡಿಯವರು ಅಧ್ಯಕ್ಷೀಯ ಸಮಾರೋಪ ಭಾಷಣವನ್ನು ನೇರವೇರಿಸದರು , ಪ್ರಾಚಾರ್ಯರಾದ ಸಿ.ವಿ. ಕಣಬುರ್ಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಚಾರ್ಯ ಆರ್.ಬಿ. ಬಾನಪ್ಪನವರ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಪಿ.ವ್ಹಿ. ಬೇಟಗೇರಿ , ಎಸ್. ಎಸ್. ಹರಕುಣಿ, ಉಪಸ್ಥಿತರಿದ್ದರು. ಎಸ್. ಎಸ್. ಜಂಬಗಿ ಗುರುಮಾತೆ ಪ್ರಾರ್ಥಿಸಿದರು ವಾಯ.ಪಿ. ತಳವಾರ ವಂದಿಸಿದರು. ಎಂ.ಆರ್.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಉಪನ್ಯಾಸಕರು ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.