ಕಲಿತ ವಿದ್ಯೆ ಕೊನೆಯವರೆಗೂ ಜೊತೆಗಿರುತ್ತದೆ: ದತ್ತಪ್ಪಯ್ಯ ಶ್ರೀ
ಸಿಂದಗಿ08: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಎಂದು ಭೀಮಾಶಂಕರ ಮಠದ ಪೀಠಾಧ್ಯಕ್ಷರು ಸದ್ಗುರು ದತ್ತಪ್ಪಯ್ಯ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ರವಿವಾರ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ 1997-98ನೇ ಸಾಲಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಬಳಗ ಎಚ್.ಟಿ. ಕುಲಕರ್ಣಿ ಗುರುಗಳಿಗೆ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.
ಗುರುವಂದನೆ ಸ್ವೀಕರಿಸಿದ ಗುರು ಎಚ್.ಟಿ. ಕುಲಕರ್ಣಿ ಮಾತನಾಡುತ್ತಾ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಶಿಕ್ಷಕರಿಗೆ ಇರುವ ಬಳಗ ಮತ್ತಾರಿಗೂ ಇರುವುದಿಲ್ಲ. ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿಕೊಂಡದ್ದು ನನ್ನ ಜೀವನ ಸಾರ್ಥಕವಾಯಿತು. ಗುರುವಿಗೆ ಒಳ್ಳೆಯ ಶಿಷ್ಯ ದೊರೆಯುವುದು ಪೂರ್ವ ಜನ್ಮದ ಪ್ರತಿಫಲ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಶ್ರೀದೇವಿ ಗೋಣಿ, ಆಶಾ ಬಮ್ಮಣ್ಣಿ, ನಿಂಗರಾಜ ಬಗಲಿ, ಶಾಂತವೀರ ಗಣಾಚಾರಿ, ಅಪ್ಪು ಬಿರಾದಾರ ಮಾತನಾಡಿದರು.
1997-98ನೇ ಸಾಲಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಬಳಗ ಎಚ್.ಟಿ. ಕುಲಕರ್ಣಿ ದಂಪತಿ ಗುರುಗಳಿಗೆ ಸನ್ಮಾನಿಸಿ ಅಭಿನಂದಿಸಿ ಗುರುವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ 20 ವರ್ಷ ಸೈನಿಕ ಸೇವೆಸಲ್ಲಿಸಿದ ಮಾಜಿ ಸೈನಿಕ ಶ್ರೀಶೈಲ ಬಗಲಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಮುತ್ತು ಪಟ್ಟಣಶೆಟ್ಟಿ, ಕುಮಾರ ಕಿಣಗಿ, ಜಗದೀಶ ಹಿರೇಮಠ, ರಾಜು ಬಿರಾದಾರ, ಶಿವಶರಣ ಬೂದಿಹಾಳ, ಮುತ್ತುರಾಜ ಮಂದೇವಾಲಿ, ನಿರ್ಮಲಾ, ರವಿಕುಮಾರ ಗಾಯಕವಾಡ, ಆದಯ್ಯ ಹಿರೇಮಠ, ಸೋಮು ವಸ್ತ್ರದ, ಆನಂದ ಮಾಡಗಿ, ಶಿವುಕುಮಾರ ಕಬ್ಬಿನ, ಅನೀಲ ಬಿರಾದಾರ, ರಾಜು ಸೊನ್ನದ, ರಾಜಶೇಖರ ಬಿರಾದಾರ, ಆಶಿಫ್ ಬಿದರಕುಂದಿ ಸೇರಿದಂತೆ ಗೆಳೆಯರ ಬಳಗ ಭಾಗವಹಿಸಿದ್ದರು. ಸುಕೃತಾ ಪಟ್ಟಣಶೆಟ್ಟಿ ನಿರೂಪಿಸಿದರು.