ಅಥಣಿ

ಉಚಿತ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

ಉಚಿತ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ
ಜನಸೇವಾ ಫೌಂಡೇಶನ್ ವತಿಯಿಂದ ಉಚಿತ ಕುಡಿಯುವ ನೀರಿನ ಟ್ಯಾಂಕ್ ಚಾಲನೆ ನೀಡುತ್ತಿರುವ ಗಣ್ಯರು.

ಅಥಣಿ 26: ಬೇಸಿಗೆಯ ಕಾಲದಲ್ಲಿ ಉಂಟಾಗುವ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡು ಉಚಿತವಾಗಿ ಕುಡಿಯಲು ಶುದ್ಧ ನೀರನ್ನು ಮುಖಂಡ ರವಿ ಪೂಜಾರಿ ಅವರ ನೇತೃತ್ವದ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆ ವತಿಯಿಂದ ಸ್ಥಾಪನೆ ಮಾಡಿದ್ದು ಶ್ಲಾಘನೀಯ ಎಂದು ಪಿ.ಎಸ್.ಐ ಕುಮಾರ ಹಾಡಕರ ಹೇಳಿದರು.

ಸ್ಥಳೀಯ ಐಬಿ ರೋಡ್‍ಗೆ ಹೊಂದಿಕೊಂಡ ಜಾಗೆಯಲ್ಲಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಉಚಿತ ಶುದ್ಧ ಕುಡಿಯುವ ನೀರನ್ನು ಒದಗಿಸುವ ಟ್ಯಾಂಕ್ ಉದ್ಘಾಟನೆ ಮಾಡಿ ಮಾತನಾಡಿದರು. 

ಈ ವೇಳೆ ಜನಸೇವಾ ಫೌಂಡೇಶನ್ ಅಧ್ಯಕ್ಷ ರವಿ ಪೂಜಾರಿ, ಹುದ್ದಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಹುದ್ದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ