ಗುಳೇಗುಡ್ಡ

ಮಹಾಪುರುಷರ ಆದರ್ಶ ಅನುಕರಣೀಯ: ಶಿಲ್ಪಾ ನಾಗರಾಜ ಹಳ್ಳಿ

ಮಹಾಪುರುಷರ ಆದರ್ಶ ಅನುಕರಣೀಯ: ಶಿಲ್ಪಾ ನಾಗರಾಜ ಹಳ್ಳಿ

ಗುಳೇದಗುಡ್ಡ 19: ಮಹಾಪುರುಷರು ತಮ್ಮ ಜೀವನದ ಅನೇಕ ಆದರ್ಶಗಳನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವಷ್ಟಾದರೂ ನಾವು ಅನುಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ಶಿಲ್ಪಾ ನಾಗರಾಜ ಹಳ್ಳಿ ಹೇಳಿದರು.

ಅವರು ಶುಕ್ರವಾರ ಪುರಸಭೆಯಲ್ಲಿ ಛತ್ರಪತಿ ಶಿವಾಜಿ ಹಾಗೂ ಸವಿತಾ ಮಹರ್ಷಿಗಳ ಜನ್ಮದಿನವನ್ನು ಆಚರಿಸಿ ಮಾತನಾಡಿ, ಪ್ರತಿಯೊಬ್ಬ ಮಹಾಪುರುಷರೂ ತಮ್ಮ ಆದದರ್ಶಗಳಿಂದ ಉತ್ತಮವಾದ ಸಮಾಜವನ್ನು ಕಟ್ಟಿ ಹೋಗಿದ್ದಾರೆ. ಅವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದರ ಜೊತೆಗೆ ಅವರು ಬಿಟ್ಟು ಹೋಗಿರುವ ಉದಾತ್ತವಾದ ಆದರ್ಶಗಳಲ್ಲಿ ಕೆಲವಷ್ಟದರೂ ಪಾಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.

ಛತ್ರಪತಿ ಶಿವಾಜಿ ಮತ್ತು ಸವಿತಾ ಮಹರ್ಷಿಗಳ ಭಾವಚಿತ್ರಗಳಿಗೆ ಆರಂಭದಲ್ಲಿ ಪೂಜೆ ಸಲ್ಲಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಎಸ್.ಯು. ಮಂಗಳೂರ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ್, ಎಸ್.ಎಂ.ಸರ್‍ಗಣಾಚಾರಿ, ಎಸ್.ಟಿ. ಆಲೂರ, ಎಂ.ಆರ್.ಹೆಬ್ಬಳ್ಳಿ, ಕುಮಾರ ತಟ್ಟಿಮಠ, ಎಂ.ಎಂ. ನಂದಿಕೇಶ್ವರ, ಶಿವಾನಂದ ಬ್ಯಾಳಿ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ