ಹೂವಿನ ಹಡಗಲಿ

ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಸಿಎಂ.ಕುರ್ಚಿಗೆ ಕಿತ್ತಾಟ ಮಾಡುತ್ತಿದೆ: ಗೋವಿಂದ ಕಾರಜೋಳ

ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಸಿಎಂ.ಕುರ್ಚಿಗೆ ಕಿತ್ತಾಟ ಮಾಡುತ್ತಿದೆ: ಗೋವಿಂದ ಕಾರಜೋಳ

ಹೂವಿನಹಡಗಲಿ 06 : ಹೂವಿನಹಡಗಲಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮೊರಗೇರಿ ಗ್ರಾಮದ ಆನಂದ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಸೂರ್ಯಕಾಂತಿ ಕಾಳು ಕಟ್ಟುವ ಹಂತದಲ್ಲಿ ಒಣಗುತ್ತಿದ್ದ ಬೆಳೆಯನ್ನು ವೀಕ್ಷಣೆ ಮಾಡಿದ ಬಿಜೆಪಿ ಬರ ಅಧ್ಯಯನ ತಂಡದ ಮಾಜಿ ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬರ ಪರೀಶೀಲನೆ ಸೋಮವಾರ ನಡೆಸಿತು. ಈ ವೇಳೆ ರೈತರು ಬರ ಸಂಕಷ್ಟದಿಂದ ತಮ್ಮ ದನ,ಜಾನುವಾರುಗಳನ್ನು ಮಾರಬೇಕಾದ ಪರಿಸ್ಥಿತಿ ಎದುರಾಗಿದೆ ಬಗ್ಗೆ ಅಳಲು ತೋಡಿಕೊಂಡರು. 

ಬರ ಪರೀಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗೋವಿಂದ ಕಾರಜೋಳ ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಬರ ತಾಂಡವಾಡುತ್ತಿದೆ.ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತು. ಗುಳೆ ಹೋಗದ ಹಾಗೆ ದನ-ಕರುಗಳನ್ನು ಮಾರಾಟ ಮಾಡದ ಹಾಗೆ ತಡೆಯಬೇಕಿತ್ತು. ಗೋ ಶಾಲೆ ಆರಂಭಿಸಿ ಮೇವು ಹಂಚಿಕೆ ಮಾಡಬೇಕಿತ್ತು.ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಕೊಳ್ಳಬೇಕು ಅದರ ಬದಲು ಮುಖ್ಯಮಂತ್ರಿ ಕುರ್ಚಿಗೆ ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಗುಂಪುಗಳಾಗಿ ರಾಜಕೀಯ ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. 

ಈಗಾಗಲೇ ರೈತರು ಎಕರೆಗೆ ಕನಿಷ್ಠ 30 ಸಾವಿರ ಬೀಜ, ಗೊಬ್ಬರಕ್ಕೆ ಖರ್ಚು ಮಾಡಿದ್ದಾರೆ. ಕೂಡಲೇ ಕಾಂಗ್ರೆಸ್ ಸರ್ಕಾರ ರೈತರ ಬೆಳೆ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.  

ಶಾಸಕರಾದ ಮಹೇಶ ಟೆಂಗಿನಕಾಯಿ, ಮುಖಂಡ ಷಣ್ಮುಖ ಗುರುಕಾರ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಹಡಗಲಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಮುಖಂಡರಾದ ಓದೋಗಂಗಪ್ಪ, ಹೆಚ್‌.ಪೂಜಪ್ಪ, ಈಟಿ ಲಿಂಗರಾಜ ಇತರರಿದ್ದರು. 


ಸುದ್ದಿ ಓದಿ