ಮನರಂಜನೆ

ಯಾವ ಬಟ್ಟೆ ಧರಿಸಬೇಕು ಎಂಬುದು.. ಹುಡುಗಿಯರಿಗೆ ಗೊತ್ತಿದೆ; ಕಾಜಲ್ ಅಗರ್ವಾಲ್

ಯಾವ  ಬಟ್ಟೆ  ಧರಿಸಬೇಕು ಎಂಬುದು..   ಹುಡುಗಿಯರಿಗೆ ಗೊತ್ತಿದೆ; ಕಾಜಲ್ ಅಗರ್ವಾಲ್

ಹೈದ್ರಾಬಾದ್ ಸೆಪ್ಟೆಂಬರ್ 7: ಎಂತಹ   ಬಟ್ಟೆ  ಧರಿಸಿಕೊಳ್ಳಬೇಕು  ಎಂಬುದು ಹುಡುಗಿಯರಿಗೆ ತಿಳಿದಿದೆ.  ಈ  ವಿಷಯದಲ್ಲಿ ..  ಅವರಿಗೆ  ಯಾರ ಸಲಹೆಯೂ   ಅಗತ್ಯವಿಲ್ಲ ಎಂದು  ನಾಯಕಿ ನಟಿ  ಕಾಜಲ್ ಅಗರ್ವಾಲ್   ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ  ಬೆಂಗಳೂರಿನ  ಉದ್ಯಾನ ವನವೊಂದರಲ್ಲಿ,   ಸ್ಪೋರ್ಟ್ಸ್   ಬ್ರಾ ಧರಿಸಿ   ವ್ಯಾಯಾಮ ನಡೆಸುತ್ತಿದ್ದ   ನಟಿ ಸಂಯುಕ್ತ  ಹೆಗ್ಡೆ   ವಿರುದ್ದ   ಕವಿತಾ  ರೆಡ್ಡಿ ಎಂಬ  ಮಹಿಳೆ  ಆಕ್ರೋಶ  ವ್ಯಕ್ತಪಡಿಸಿದ್ದರು. ಸಂಯುಕ್ತ  ಸ್ನೇಹಿತೆಯರ ಮೇಲೆ ಕೈ ಮಾಡಲು ಮುಂದಾದ  ಪ್ರಯತ್ನವೂ ನಡೆದಿದ್ದು,  ಉದ್ಯಾನ ವನದಲ್ಲಿದ್ದವರೂ ಸಹ ಸಂಯುಕ್ತ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. 

ಈ ಕುರಿತ  ವಿಡಿಯೋ  ಸೋಷಿಯಲ್  ಮೀಡಿಯಾದಲ್ಲಿ   ವೈರಲ್ ಆಗಿದೆ. ಬಹಳ ಮಂದಿ ಸಿನಿಮಾ ಪ್ರಮುಖರು, ಇತರ ಸೆಲೆಬ್ರಟಿಗಳು ಸಂಯುಕ್ತಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ನಾಯಕಿ ನಟಿ  ಕಾಜಲ್ ಅಗರವಾಲ್ ಕೂಡಾ ಸಂಯುಕ್ತಗೆ  ಬೆಂಬಲ ನೀಡಿ  ಟ್ವೀಟ್ ಮಾಡಿದ್ದಾರೆ.

ಓ ಮೈ ಗಾಡ್ .. ಸ್ಯಾಮ್!   ಹೀಗೆ  ನಡೆಯಬಹುದು ಎಂದು   ನಂಬಲು ಸಾಧ್ಯಗುತ್ತಿಲ್ಲ.   ಮಿಸ್  ಕವಿತಾ ರೆಡ್ಡಿ. ನಿಮ್ಮ ಕೋಪಕ್ಕೆ   ಹಲವು   ಕಾರಣ  ತಿಳಿದುಕೊಂಡು  ಪರಿಹರಿಸಿಕೊಳ್ಳಿ,  ನಿಮ್ಮ ಬೆದರಿಕೆ  ಸ್ವಭಾವ, ಹತಾಶೆಗೆ ಮೂಲ ಏನು?  ಎಂಬುದನ್ನು ತಿಳಿದುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಹುಡುಗಿಯರು ಯಾವ ರೀತಿ  ಬಟ್ಟೆಗಳನ್ನು ಧರಿಸಬೇಕು ಎಂಬುದು   ಗೊತ್ತಿದೆ.  ಸಲಹೆ ನೀಡುವುದು ನಿಲ್ಲಿಸಿ.  ಅವರವರ   ಕೆಲಸ  ಅವರು ನೋಡಿಕೊಂಡರೆ ಉತ್ತಮ ಎಂದು ಕಾಜಲ್  ಖಾರವಾಗಿ  ಬರೆದುಕೊಂಡಿದ್ದಾರೆ.

ಸುದ್ದಿ ಓದಿ