ರಾಣೆಬೆನ್ನೂರ

ಕಬಡ್ಡಿ ಆಟವು ಗಂಡುಗಲಿಗಳ ದೇಶಿ ಕ್ರೀಡೆಯಾಗಿದೆ: ಕರೇಗೌಡ್ರ

ಕಬಡ್ಡಿ ಆಟವು ಗಂಡುಗಲಿಗಳ ದೇಶಿ ಕ್ರೀಡೆಯಾಗಿದೆ: ಕರೇಗೌಡ್ರ

ರಾಣೇಬೆನ್ನೂರ25:   ಕಬಡ್ಡಿ ಆಟವು ಗಂಡುಗಲಿಗಳ ದೇಶಿ ಕ್ರೀಡೆಯಾಗಿದ್ದು, ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಜಟ್ಟೆಪ್ಪ ಕರೇಗೌಡ್ರ ಹೇಳಿದರು. ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ಜೆಎಸ್‌ಕೆ ಕಬ್ಬಡ್ಡಿ ಪ್ರೀಮಿಯರ್ ಲೀಗ್ ಮೇಗಾ ಪೈನಲ್‌ನ ಹೊನಲು ಬೆಳಕಿನ ಮ್ಯಾಟ್ ಲೀಗ್ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

 ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪ್ರಧಾನವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕಬಡ್ಡಿಗೆ ಹೆಚ್ಚಿನ ಪೋತ್ಸಾಹ ಸಿಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಆಗಾ ಮಾತ್ರ ಗ್ರಾಮೀಣ ಕ್ರೀಡೆಗಳು ಉಳಿಯುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕ್ರೀಡೆಯಲ್ಲಿ ಸಕ್ರಿಯರಾಗುವುದು ಮುಖ್ಯವಾಗಿದೆ. ಅಭಿಮಾನಿ ಸಂಘದ ಆಯೋಜಿಸಿರುವ ಪ್ರೋ.ಕಬ್ಬಡ್ಡಿ ಅಂತಿಮ ದಿನಕ್ಕೆ ಬಂದಿದ್ದು, ಇದರಿಂದ ತಾಲೂಕಿನ ಗ್ರಾಮೀಣ ಕ್ರೀಡೆಗಳು ಬೆಳಕಿಗೆ ಬಂದಿದ್ದಾರೆ. ಮುಂದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು. 

ಚಂದ್ರಣ್ಣ ಬೇಡರ ಮಾತನಾಡಿ, ಕ್ರಿಕಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ. ಮೊದಲು ಆಟ ಆಡವರಿಗೆ ಪಾಲಕರು ಬೈಯುತ್ತಿದ್ದರು. ಆದರೇ, ಇಂದು ಆಟದಲ್ಲಿ ಮುಂದೆ ಬರುವವರಿಗೆ ದೇಶದಲ್ಲಿ ಉತ್ತಮ ಗೌರವವಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರೋ. ಕಬಡ್ಡಿ ಆರಂಭವಾದಾಗಿನಿಂದ ದೇಶಿ ಕಬಡ್ಡಿ ಆಟಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ. ಈಗ ನಡೆಯುತ್ತಿರುವ ಪ್ರೋ.ಕಬಡ್ಡಿಯಲ್ಲಿ ಅನೇಕ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ. ಇದೇ ರೀತಿ ದೇಶಿ ಕ್ರೀಡೆಗಳಿಗೆ ಜನರು ಹೆಚ್ಚಿನ ಪೋತ್ಸಾಹ ನೀಡಬೇಕು ಎಂದರು. ಇದಕ್ಕೂ ಮುಂಚೆ ಪ್ರೋ. ಕಬಡ್ಡಿ ಪಂದ್ಯಾವಳಿ ಪೈನಲ್ ತಂಡದ ಕ್ರೀಡಾಪಟುಗಳನ್ನು ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡುವ ಮೂಲಕ ನಗರಸಭೆ ಕ್ರೀಡಾಂಗಣಕ್ಕೆ ಕರೆತರಲಾಯಿತು. 

ನೀಲಕಂಠಪ್ಪ ಕುಸಗೂರ, ರವಿ ಹುಚ್ಚಗೊಂಡರ, ಉದಯ ಕಂಬಳಿ, ಮಾಲತೇಶ ಹುಚ್ಚಣ್ಣನವರ, ಬೀಮೇಶ ಕುಡಪಲಿ,ಪಕ್ಕೀರ​‍್ಪ ಹೊನ್ನಾಳ್ಳಿ, ಹನುಮಂತಪ್ಪ ಮಡಿವಾಳರ, ಗೀರೀಶ ಹೆಗ್ಗಪ್ಪನವರ, ಮಹಮ್ಮದ ಅಲಿ ಅಸುಂಡಿ, ಡಾ.ಮಹಾಂತೇಶ ಹುಚ್ಚಣ್ಣನವರ, ನಿಂಗರಾಜ ಕೋಡಿಹಳ್ಳಿ, ಶಿವಾನಂದ ಕನ್ನಪ್ಪಳ್ಳನವರ, ಅಶೋಕ ಗಂಗನಗೌಡ್ರ, ವಿಶ್ವನಾಥ ಕರೇಗೌಡ್ರ ಸೇರಿದಂತೆ ಮತ್ತಿತರು ಇದ್ದರು. ರಾಣೇಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ಜೆಎಸ್‌ಕೆ ಕಬ್ಬಡ್ಡಿ ಪ್ರೀಮಿಯರ್ ಲೀಗ್ ಮೇಗಾ ಪೈನಲ್‌ನ ಹೊನಲು ಬೆಳಕಿನ ಮ್ಯಾಟ್ ಲೀಗ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಜಟ್ಟೆಪ್ಪ ಕರೇಗೌಡ್ರ ಮಾತನಾಡಿದರು. 

ರಾಣೇಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ಜೆಎಸ್‌ಕೆ ಕಬ್ಬಡ್ಡಿ ಪ್ರೀಮಿಯರ್ ಲೀಗ್ ಮೇಗಾ ಪೈನಲ್‌ನ ಹೊನಲು ಬೆಳಕಿನ ಮ್ಯಾಟ್ ಲೀಗ್ ಪಂದ್ಯಾವಳಿಯ ದ್ವಜಾರೋಹಣವನ್ನು ಕಾಂಗ್ರೇಸ್ ಮುಖಂಡ ಜಟ್ಟೆಪ್ಪ ಕರೇಗೌಡ್ರ ನೆರವೇರಿಸಿದರು. 


ಸುದ್ದಿ ಓದಿ