ಆಟವು ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ ವಿಕಾಸದಲ್ಲಿ ತುಂಬಾ ಉಪಯುಕ್ತ
ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಅಭಿಪ್ರಾಯ: ಪುರುಷರ ಹಾಗೂ ಮಹಿಳೆಯರ ಟೆಬೆಲ್ಟೆನಿಸ್ ಪಂದ್ಯಾವಳಿಯ ಸಮಾರೋಪ
ಕಾಗವಾಡ 31: ಆಟವು ವಿದ್ಯಾರ್ಥಿಗಳ ಶಾರೀರಿಕ, ಸಾಮಾಜಿಕ, ಮಾನಸಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ತುಂಬಾ ಉಪಯುಕ್ತವಾಗಿವೆ. ಆಟಆಡುತ್ತ ಮಕ್ಕಳು ಇತರ ಮಕ್ಕಳ ಜೊತೆ ಹೊಂದಿಕೊಂಡು ಹೋಗುವುದನ್ನು, ಸಹಕರಿಸುವುದನ್ನು ಕಲಿತುಕೊಳ್ಳುತ್ತಾರೆ ಎಂದು ಮಲ್ಲಕಾರ್ಜುನ ಆಶ್ರಮ ಟ್ರಸ್ಟ್ನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಅಭಿಪ್ರಾಯ ಪಟ್ಟರು.
ಕಾಗವಾಡ ಶಿವಾನಂದ ಮಹಾವಿದ್ಯಾಲಯ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ಟೆಬೆಲ್ಟೆನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ವ್ಹಿ.ಎಸ್.ತುಗಶೆಟ್ಟಿಯವರು ಆಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಆಟವಾಡೋದು ಬಹಳ ಮುಖ್ಯ. ಆದರೆ ಆಡುವಾಗ ಗೆಲ್ಲಲೆಂದೇ ಆಡಬೇಕು. ಯಾವುದೇ ಕ್ರೀಡೆಯಲ್ಲಿ ಆಡುವವರು ಸೋಲಬೇಕೆಂದು ಆಟ ಆಡಬಾರದು. ಸೋಲಿಗೆ ಹೆದರಲೂಬಾರದು, ಯಾರು ಸೋಲಲು ಹೆದರುವುದಿಲ್ಲವೋ ಅವರೇ ಗೆಲ್ಲುತ್ತಾರೆ. ಆಟದಿಂದ ಶಿಸ್ತು ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ಕ್ರೀಡಾ ಮನೋಭಾವವೂ ವೃದ್ಧಿಯಾಗುತ್ತದೆ ಎಂದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿಜೇತ ತಂಡಗಳ ಹೆಸರನ್ನು ಡಾ.ಎಸ್.ಎ.ಕರ್ಕಿ ಪ್ರಕಟಿಸಿದರು.
ಪುರುಷರ ಪಂದ್ಯಾವಳಿಯಲ್ಲಿ ಬಸವೇಶ್ವರ ಸೈನ್ಸ್ ಕಾಲೇಜು ಬಾಗಲಕೋಟ, (ಯುಜಿ) ಪ್ರಥಮ ಸ್ಥಾನವನ್ನು ಪಡೆದರೆ, ಬಸವೇಶ್ವರ ಸೈನ್ಸ್ಕಾಲೇಜು ಬಾಗಲಕೋಟ (ಪಿಜಿ) ದ್ವಿತೀಯ ಸ್ಥಾನವನ್ನು ಪಡೆದರು. ತೃತೀಯ ಸ್ಥಾನವನ್ನು ಗೋಗಟೆ ಕಾಲೇಜು ಬೆಳಗಾವಿ ಪಡೆದುಕೊಂಡಿತು.
ಮಹಿಳೆಯರ ವಿಭಾಗದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು - ಬಿಎಲ್ಡಿ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಜಮಖಂಡಿ. ದ್ವಿತೀಯ ಸ್ಥಾನವನ್ನು - ಬಸವೇಶ್ವರ ಕಾಲೇಜು, ಬಾಗಲಕೋಟ, ತೃತೀಯ ಸ್ಥಾನವನ್ನುಹಿಎಸ್ಎಂಎಟಿ’ನ ಶಿವಾನಂದ ಮಹಾವಿದ್ಯಾಲಯ, ಕಾಗವಾಡ ಪಡೆದುಕೊಂಡಿದ್ದಾರೆ. ವಿಜೇತರನ್ನು ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಡಾ.ಎ.ಎಂ.ಜಕ್ಕಣ್ಣವರ ಹಾಗೂ ಪ್ರೊ.ಪದ್ಮಜಾ ಕಿನಂಗೆ ನಿರೂಪಿಸಿದರು. ಸಮಾರಂಭದಲ್ಲಿ ಪಂದ್ಯಾವಳಿಯ ಆಯ್ಕೆ ಪ್ರಕ್ರಿಯೆಯ ಸದಸ್ಯರಾದ ಡಾ.ಬಿ.ಎಂ ವಾಲಿ, ಹಾಗೂ ವಿವಿಧ ಕಾಲೇಜಿನ ದೈಹಿಕ ನಿರ್ದೇಶಕರಾದ ಎಲ್.ಪಿ.ಬೂದನವರ, ಬಸವರಾಜ, ಲೋಕಾಪೂರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪದ್ಮಾವತಿ ನರೋಟಿ ಪ್ರಾರ್ಥಿಸಿದರು. ದೈಹಿಕ ಕ್ರೀಡಾಕೂಟದ ಕಾರ್ಯಾಧ್ಯಕ್ಷ ಡಾ. ಎಸ್.ಪಿ.ತಳವಾರ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಆರ್.ಎಸ್.ನಾಗರೆಡ್ಡಿ ವಂದಿಸಿದರು.