ಬಬಲಾದಿ ಮುತ್ಯಾ ದೇವಸ್ಥಾನ ಅಭಿವೃದ್ಧಿಗೆ ಅಡಿಗಲ್ಲು ಪೂಜೆ
ಕಾಗವಾಡ 07: ಸಂಕೋನಟ್ಟಿ ಗ್ರಾಮದಲ್ಲಿ ಪುರಾತನವಾದ “ಬಬಲಾದಿ ಮುತ್ಯಾ” ದೇವಸ್ಥಾನ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ದಾನವೀರ ಮಹಾವೀರ ಪಡನಾಡ ಇವರಿಂದ ಅಡಿಗಲ್ಲು ಪೂಜೆ ಕಾರ್ಯಕ್ರಮ ನೆರವೇರಿತು.
ಬುಧವಾರ ರಂದು ಸಂಕೋನಟ್ಟಿ ಗ್ರಾಮದಲ್ಲಿ ಎಲ್ಲ ಭಕ್ತರು ಒಂದುಗೂಡಿ ಪುರಾತನವಾದ “ಬಬಲಾದಿ ಮುತ್ಯಾ” ದೇವಸ್ಥಾನದ ಅಭಿವೃದ್ಧಿ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಪೂಜೆ ನೆರವೇರಿಸಿದರು.
ಮಂದಿರ ನಿರ್ಮಾಣಕ್ಕಾಗಿ ನಾನು ಸಹಾಯಹಸ್ತ ನೀಡುತ್ತೇನೆಯೆಂದು ಮಹಾವೀರ ಪಡನಾಡ ಹೇಳಿದರು. ಇದೇ ರೀತಿ ಇನ್ನೂಳಿದ ರೈತ ಮುಖಂಡರು ಶೀಘ್ರದಲ್ಲಿ ಮಂದಿರ ನಿರ್ಮಾಣಕ್ಕಾಗಿ ಸಹಾಯ ಮಾಡುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಕೋನಟ್ಟಿ ಗ್ರಾಮದ ಯುವ ಮುಖಂಡರಾದ ಕುಮಾರ ಪಡನಾಡ, ಚಂದು ದೇಸಾಯಿ, ಉಮೇಶ ಬಸ್ರಿಕೋಡಿ, ಸುರೇಶ ಪಡನಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.