ಮಂಗನ ಕಾಟಕ್ಕೆ ಹೈರಾನಾದ ಕಾಗವಾಡ ಪಟ್ಟಣದ ಜನತೆ..! ಸುಮಾರು ಜನರಿಗೆ ಗಾಯ..! ಮಂಗನನ್ನು ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ..!!
ಕಾಗವಾಡ 08: ಪಟ್ಟಣದಲ್ಲಿ ಕಳೆದೆರೆಡು ದಿನಗಳಿಂದ ಮಂಗವೊಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ, ಸಾರ್ವನಿಕರಿಗೆ ವಿಪರೀತ ಕಾಟ ನೀಡುತ್ತಿದ್ದು, ಕಂಡಕಂಡವರ ಮೇಲೆರಗಿ, ಕಚ್ಚಲು ಪ್ರಾರಂಭಿಸಿದೆ. ಇದರಿಂದ ಸುಮಾರು ನಾಲ್ಕೈದು ಜನರು ಮಂಗನ ಕಡಿತದಿಂದ ಗಾಯಗೊಂಡಿದ್ದು, ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಹರಸಾಹಸ ಪಟ್ಟರೂ ಮಂಗ ಮಾತ್ರ ಅವರ ಬಲೆಗೆ ಬೀಳದೇ ಕಾಟ ಮುಂದುವರೆಸಿದೆ.
ನಿನ್ನೆ ಬುಧವಾರ ದಿ. 07 ರಂದು ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷವಾದ ಮಂಗವು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಾ ಬಸ್ಸಿನಲ್ಲಿ ಏರಿ, ವೃದ್ಧನ ಮೇಲೆ ಹಲ್ಲೆ ಮಾಡಿದೆ. ಸಂಜೆಯ ವರೆಗೆ ಅದರ ಕಪಿಚೆಷ್ಠೆ ಮುಂದು ಒರೆದಿತ್ತು. ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಜೊತೆಗೆ ಸ್ಥಳೀಯರನ್ನು ಸೇರಿಸಿಕೊಂಡು ಬಲೆಯ ಜೊತೆಗೆ ಅನೇಕ ಪ್ರಯೋಗಗಳನ್ನು ಮಾಡಿದರೂ ಮಂಗ ಮಾತ್ರ ಬಲೆಗೆ ಬೀಳದೆ. ಸಾರ್ವಜನಿಕರ ಮೇಲೆ ಹಲ್ಲೆ ಮುಂದುವರೆಸಿದೆ.
ಇಂದು ಸಹ ಮೂರಾ್ನಲ್ಕು ಜನರ ಮೇಲೆ ಹಲ್ಲೆ ಮಾಡಿದ್ದು, ಅವರಿಗೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಪಟ್ಟಣಕ್ಕೆ ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು, ಕೂಡಲೇ ಮಂಗನನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ಇಂದು ಬೆಳಿಗ್ಗೆಯಿಂದಲೇ ಮಂಗನನ್ನು ಹಿಡಿಯಲು ಪ್ರಯತ್ನ ಮಾಡಲಾಗುತ್ತಿದ್ದು, ಹಿಡಿಯಲು ಹೋದವರ ಮೇಲೆ ಅದು ಹಲ್ಲೆ ಮಾಡುತ್ತೀದೆ. ಆದ್ದರಿಂದ ಅದನ್ನು ಹಿಡಿಯಲು ವಿಳಂಬವಾಗುತ್ತಿದೆ. ಪ್ರಯತ್ನ ಮುಂದುವರೆಸಿದ್ದೇವೆ ಎಂದರು.