ರಾಣೆಬೆನ್ನೂರ

ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

ರಾಣಿಬೆನ್ನೂರ 21:  ನಡೆದಾಡುವ ದೇವರು, ಮೃದು ಸ್ವಭಾವದ, ಸರಳತೆಯ ಸಜ್ಜನಿಕೆಯ  ಸಂತರಾಗಿದ್ದ  ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸಿದ್ಧೇಶ್ವರ ಶ್ರೀಗಳು ತಮ್ಮ ಪ್ರವಚನಗಳ ಮೂಲಕ ಲಕ್ಷಾಂತರ ಭಕ್ತರ ಮನದ ಮಲಿನತೆಯನ್ನು ತೊಳೆಯುವ ಮೂಲಕ ಪೂಜ್ಯನೀಯ ಪ್ರೀತಿಗೆ ಪಾತ್ರರಾಗಿದ್ದರು ಎಂದು ಗದಗ ಮತ್ತು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು. 

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಶಹರ ಪೊಲೀಸ್ ಠಾಣೆ ಹಾಗೂ ಅಕ್ಕಿ ಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿ, ಗುರು ನಮನ ಸೇವಾ ಸಮಿತಿ ವತಿಯಿಂದ ಏರಿ​‍್ಡಸಿದ್ದ ನಡೆದಾಡುವ ದೇವರೆಂದೇ ಹೆಸರಾದ  ಈ  ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  

ಸ್ಥಿತಪ್ರಜ್ಞರಾದ ಶ್ರೀಗಳು ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು. ಅರಿವು ದೊಡ್ಡದಲ್ಲ, ಆಚಾರ ದೊಡ್ಡದು ಎಂಬುದನ್ನು ನುಡಿಯುವ ಮೂಲಕ ನಡೆದು ತೋರಿಸಿದವರು ಶ್ರೀಗಳು. ಪಂಚ ಭೂತಗಳಿಂದಾದ ಈ ಕಾಯ ಪಂಚ ಭೂತಗಳಲ್ಲಿಯೇ ಲೀನವಾಗಬೇಕು ಎಂದು ತಮ್ಮ ನಡೆನುಡಿಯಂತೆ ತಮ್ಮ ಮೃತ್ಯು ಪತ್ರ ಬರೆದು ನಿದರ್ಶನರಾದವರು. ಹಾಗಾಗಿಯೇ ನಿಸರ್ಗಕ್ಕೆ ಅವರು ಬಹಳ ಒತ್ತು ನೀಡಿದ್ದರು ಎಂದು ಶ್ರೀಗಳು ನುಡಿದರು.  

ಶ್ರೀಗಳು ತಮ್ಮ ಪ್ರವಚನದಲ್ಲಿ ಶೂನ್ಯ ಸಂಪಾದನೆ ಕುರಿತು ವಿಶೇಷ ಒತ್ತು ನೀಡಿ ಮುನುಷ್ಯರನ್ನು ಸನ್ಮಾರ್ಗದಡೆಗೆ ಕರೆ ತರುವಲ್ಲಿ ಶ್ರಮಿಸುತ್ತಿದ್ದರು. ಇಚ್ಛಾಮರಣಿಯಾದ ಶ್ರೀಗಳು ಭೂಲೋಕದ ನಡೆಗೆ ನಿಲ್ಲಿಸಿ ಕಳೆದ ವರ್ಷ ವೈಕುಂಠ ಏಕಾದಶಿಯಂದು ನೇರವಾಗಿ ಕೈಲಾಸಕ್ಕೆ ನಡೆದರು. ಅವರು ಭೌತಿಕವಾಗಿ ನಮ್ಮೊದಿಗೆ ಇಲ್ಲದಿದ್ದರು ಅವರ ಆತ್ಮ ಮಾತ್ರ ನಮ್ಮೊದಿಗೆ ಇದೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಸರ್ವರೂ ನಡೆದಾಗ ಮಾತ್ರ ಅವರಿಗೆ ಸಲ್ಲಿಸಿದ ಗುರು ನಮನ ಸಾರ್ಥಕವಾಗುತ್ತದೆ ಎಂದು ಶ್ರೀಗಳು ತಿಳಿಸಿದರು. 

ಸಾನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಭಾರವು ವಿಶ್ವದಲ್ಲಿಯೇ ಶ್ರೇಷ್ಠತೆಯನ್ನು ಪಡೆದಿದೆ. ಇದು ಋಷಿ ಮುನಿಗಳ ತವರೂರು. ಹಾಗಾಗಿ ಇಲ್ಲಿ ಮಹಾಸಂತರು ಜನ್ಮತಾಳಲು ಕಾರಣವಾಗಿದೆ. ಅಂತವರಲ್ಲಿ ಸರಳತೆಯ ಸಕಾರ ಮೂರ್ತಿ ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸಿದ್ಧೇಶ್ವರ ಶ್ರೀಗಳು. ಸವರ ಬದುಕೇ ಸರ್ವ ಜನರ ಬದುಕಿನ ಕೈಪಿಡಿಯಾಗಿದೆ ಎಂದರು.  

ಶ್ರೀ ಮಠಕ್ಕೆ ಬರುವ ಹಲವಾರು ಭಕ್ತರು ಶ್ರೀಗಳನ್ನು ಕುರಿತು ನೀವು ಹಲವಾರು ಸನ್ಯಾಸಿಗಳಿಗೆ ಕಾವಿ ತೊಡಿಸಿ ದೀಕ್ಷೆ ನೀಡಿದ್ದೀರಿ ಆದರೆ ನೀವು ಏಕೆ? ಕಾವಿ ಹಾಕಿಲ್ಲ ಎಂದು ಕೇಳಿದಾಗ ಕಾಯಿ ಮಾಗಿದಾಗ ಹಣ್ಣಾಗುತ್ತದೆ ಹಾಗೇಯೇ ಅವರು ಪರಿಪಕ್ವವಾಗಿದ್ದಾರೆ. ನಾನು ಇನ್ನೂ ಪರಿಪೂರ್ಣನಾಗಿಲ್ಲ ಎಂದು ಕೇಳುವ ಅವರ ಮಾತು ನಿರಾಭಾರಿತನವಾಗಿತ್ತು. ಎಂತಹ ಪಂಡಿತರೇ ಇರಲಿ ಮತ್ತು ದಡ್ಡನೇ ಇರಲಿ ಅವರಲ್ಲಿ ಇರುವ ಅಂಧಕಾರವನ್ನು ತೊಳೆಯುವ ದಿವ್ಯ ಜ್ಷಾನ ಅವರಲ್ಲಿತ್ತು. ಕಾರಣ ಅವರು ಮೂರ್ತಿ ಪ್ರೀತಿಗಿಂತ ಪುಸ್ತಕ ಪ್ರೇಮಿತಾಗಿದ್ದರು ಎಂದು ಶ್ರೀಗಳ ಗುಣಗಾನ ಮಾಡಿದರು.    

ಹುಲ್ಲಾಳ ಗುರುದೇವಾಶ್ರಮ ಹರ್ಷಾನಂದ ಮಹಾಸ್ವಾಮಿಗಳುಮಾತನಾಡಿ, ಸಿದ್ಧೇಶ್ವರ ಶ್ರೀಗಳು ನಿರಾಭಾರಿ ಹಾಗೂ ಕಿಸೆ ಇಲ್ಲದ ಸಂತ ಎಂಬುದಕ್ಕೆ ನಾನು ಮತ್ತು ಶ್ರೀಗಳು ವಿದೇಶಕ್ಕೆ ತೆರಳಿದಾಗ ಅಲ್ಲಿ ಅವರು ನನಗೆ ಒಂದು ಮಾತು ಹೇಳಿದರು. ನಿಮ್ಮ ಮೇಲೆ ನನಗೆ ನಂಬಿಕೆ ಇದೆ ಇಲ್ಲಿಂದ ಯಾವುದೇ ಸಾನು ತರಕೂಡದು ಎಂದು ತಾಕೀತು ಮಾಡಿದ್ದು ಅವರ ನಡೆ ಮತ್ತು ನುಡಿಗೆ  ಸಾಕ್ಷಿಯಾಗಿತ್ತು ಎಂದು ಅನೇಕ ಉದಾಹರಣೆಗಳ ಮೂಲಕ ಅವರ ಗುಣಗಾನ ಮಾಡಿದರು.  

ಶಹರ ಪಿಎಸ್‌ಐ ಗಟ್ಟೆಪ್ಪ  ಗುಂಜುಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ವಿವೇಕಾನಂದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ  ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಕಾಶ ಬುರಡಿಕಟ್ಟಿ, ಏಕನಾಥ ಭಾನುವಳ್ಳಿ, ಎ.ಎಂ. ನಾಯಕ, ಶೇಖಪ್ಪ ಹೊಸಗೌಡ್ರ, ರವೀಂದ್ರಗೌಡ ಪಾಟೀಲ, ಅಜೇಯ ಮಠದ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ