ಧಾರವಾಡ - ಹುಬ್ಬಳ್ಳಿ

ರೈತರ ಜಮೀನಿಗೆ ವಕ್ಸ್‌ ಆಸ್ತಿ ಎಂದು ನಮೂದು ಉಪ್ಪಿನ ಬೆಟಗೇರಿಗೆ ಮುತಾಲಿಕ್

ರೈತರ ಜಮೀನಿಗೆ ವಕ್ಸ್‌ ಆಸ್ತಿ ಎಂದು ನಮೂದು ಉಪ್ಪಿನ ಬೆಟಗೇರಿಗೆ ಮುತಾಲಿಕ್

ರೈತರ ಜಮೀನಿಗೆ ವಕ್ಸ್‌ ಆಸ್ತಿ ಎಂದು ನಮೂದು ಉಪ್ಪಿನ ಬೆಟಗೇರಿಗೆ ಮುತಾಲಿಕ್  

     ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಸ್‌ ಆಸ್ತಿ ಎಂದು ನಮೂದಾದ ಹಿನ್ನೆಲೆಯಲ್ಲಿ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಇಂದು ಬೆಳಿಗ್ಗೆ   ಬಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.  

      ಉಪ್ಪಿನ ಬೆಟಗೇರಿ ಗ್ರಾಮದ ಮೂವರು ರೈತರ ಪಹಣಿ ಪತ್ರದಲ್ಲಿ ಆ ಜಮೀನು ವಕ್ಸ್‌ ಆಸ್ತಿಗೆ ಸೇರಿದ್ದು ಎಂದು ದಾಖಲಾಗಿದೆ . ವಿಜಯಪುರದಲ್ಲೂ ಇದೇ ರೀತಿ ನಡೆದಿದ್ದು , ಈ ವಕ್ಸ್‌ ಆಸ್ತಿ ಎಂದು ನಮೂದಾಗುವುದು ಈಗ ಧಾರವಾಡ ಜಿಲ್ಲೆಗೂ ವಕ್ಕರಿಸಿದೆ! ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ , ಮಸೂತಿ ಹಾಗೂ ಹುಟಗಿ ಅವರ ಜಮೀನಿನ ಪಹಣಿ ಪತ್ರದಲ್ಲಿ ವಕ್ಸ್‌ ಆಸ್ತಿ ಎಂದು ನಮೂದಾಗಿದೆ. ಹೀಗಾಗಿ ಆ ಬಗ್ಗೆ ಮಾಹಿತಿ ಪಡೆಯಲು ಜವಳಗಿ ಅವರ ಮನೆಗೆ ಬಂದ ಪ್ರಮೋದ್ ಮುತಾಲಿಕ್ ಅವರು  ಈ ಬಗ್ಗೆ ಮಾಹಿತಿ ಪಡೆದುಕೊಂಡರು,   

          ಈ ಕುರಿತು ಸಂಘಟಿತ ಹೋರಾಟ ನಡೆಯಬೇಕಿದ್ದು , ಎಲ್ಲರೂ ಹೋರಾಟಕ್ಕೆ ಮುಂದಾಗೋಣ ಎಂದರು. ಇನ್ನೂ ನಾಳೆ ದಿ.31 ರಂದು  ಧಾರವಾಡ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲು ಉಪ್ಪಿನ ಬೆಟಗೇರಿ ಗ್ರಾಮಸ್ಥರು ತೀರ್ಮಾನಿಸಿದ್ದಾರೆ. 


ಸುದ್ದಿ ಓದಿ