ಕಾಗವಾಡ

ರಸ್ತೆ ಬಳಿಯ ಅತಿಕ್ರಮಣ ತೆರೆವು

ರಸ್ತೆ ಬಳಿಯ ಅತಿಕ್ರಮಣ ತೆರೆವು

ಲೋಕದರ್ಶನ ವರದಿ 


ಕಾಗವಾಡ 06: ತಾಲೂಕಿನ ಉಗಾರ್ ಖುರ್ದ ಪಟ್ಟಣದಲ್ಲಿಯ ಬಸ್ ನಿಲ್ದಾಣದಿಂದ ಪರಸಪ್ಪಾ ವೃತ್ತದ ವರೆಗೆ ರಸ್ತೆ ಬಳಿ ಇರುವ ಅಂಗಡಿ ಮಾಲೀಕರು ಸರ್ಕಾರಿ ಜಾಗೆಯಲ್ಲಿ ಅತಿಕ್ರಮಣ ಮಾಡಿದ್ದನ್ನು ಪುರಸಭೆ ಮುಖ್ಯಾಧಿಕಾರಿ ಸುನಿಲ್ ಬಬಲಾದಿ ಹಾಗೂ ಚುನಾಯಿತ ಸದಸ್ಯರು ಅತಿಕ್ರಮಣ ತೆರವುಗೊಳಿಸಿ ಚರಂಡಿ ನಿರ್ಮಾಣ ಮಾಡಲು ಅನುಕೂಲ ಮಾಡಿದ್ದಾರೆ. 

ಪುರಸಭೆ ವತಿಯಿಂದ ಬಸ್ ನಿಲ್ದಾಣದಿಂದ ಪರಸಪ್ಪಾ ವೃತ್ತದವರಿಗೆ ರಸ್ತೆ ಅಗಲೀಕರಣ ಮಾಡಲಾಗುತ್ತಿದ್ದು ರಸ್ತೆ ಬಳಿ ಚರಂಡಿ ನಿರ್ಮಿಸಲು 9 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಪುರಸಭೆ ಚುನಾಯಿತ ಸದಸ್ಯರು ಹಿತಚಿಂತಕರು ಪಟ್ಟಣದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ.. 


ಸುದ್ದಿ ಓದಿ