ಇಂಡಿ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ

ಇಂಡಿ: ವಿಜಯಪುರದಿಂದ ಇಂಡಿ ಕಡೆಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ಕೆ.ಎ 28 ಎಫ್ 2161) ನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ತಡವಲಗಾ ಸಮೀಪದ ಜೋಡಗುಡಿ ಹತ್ತಿರದ ರಸ್ತೆ ಪಕ್ಕದ ಬೇವಿನ ಮರ ಮತ್ತು ನೀಲಗಿರಿ ಮರಕ್ಕೆ ಬಸ್ ಡಿಕ್ಕಿಯಾಗಿದ್ದು ಮೂರು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. 

ಘಟನಾ ಸ್ಥಳಕ್ಕೆ ಡಿಪೋ ನಿಯಂತ್ರಣಾಧಿಕಾರಿ ಸುರೇಶ ಚನಗೊಂಡ ಭೇಟಿ ನೀಡಿದ್ದಾರೆ. 

ಗಾಯಗೊಂಡವರನ್ನು ಮತ್ತು ಚಾಲಕ ಹಾಗೂ ನಿರ್ವಾಹಕರನ್ನು ಇಂಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ. 

ರಾಡ್ ಕಟ್ ಆದ ತಕ್ಷಣವೇ ಚಾಲಕ ಬ್ರೇಕ್ ಹಾಕಿದ್ದರಿಂದ ಮುಂದಾಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ನಾವೆಲ್ಲ ಬದುಕುಳಿದೆವು ಎಂದು ಪ್ರಯಾಣಿಕರು ತಿಳಿಸಿದ್ದಾರೆ. 


ಸುದ್ದಿ ಓದಿ