ಅಲೆಮಾರಿಗಳು, ಹೆಳವರು, ಮತದಾನದಿಂದ ವಂಚಿತರಾಗಲು ಜಿಲ್ಲಾ ಸ್ವಿಪ್ ಸಮಿತಿಯವರ ನಿರ್ಲಕ್ಷ್ಯವೇ ಕಾರಣ
ರಾಣೇಬೆನ್ನೂರು 07: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರ ಮತ್ತು ಚುನಾವಣಾ ಆರೋಗ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಬರೀ ಮಾತಲ್ಲಿ ಹೇಳುತ್ತಿದೆಯೇ ವಿನಃ ತಮ್ಮ ಜವಾಬ್ದಾರಿ ಪೂರೈಸುವುದಿಲ್ಲ, ಮತದಾನ ಜಾಗೃತಿಗಾಗಿಯೇ ‘2’ ತಿಂಗಳವರೆಗೆ ಕಾಲಹರಣ ಮಾಡುವ ಅಧಿಕಾರಿಗಳು ತಮ್ಮ ತಮ್ಮ ಮತಾದಾನದ ಪ್ರದೇಶ ಬಿಟ್ಟು ಗುಳೇ ಬಂದಿರುವ ಅಲೆಮಾರಿಗಳ ಬಗ್ಗೆ, ಹೆಳವರ ಬಗ್ಗೆ ಆಯಾ ಜಿಲ್ಲಾ ಸ್ವಿಪ್ ಸಮಿತಿ ನಿರ್ಲಕ್ಷ ವಹಿಸುವುದರಿಂದ ಈ ಜನಾಂಗ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಲಿಕ್ಕೆ ಜವಾಬ್ದಾರಿ ಹೊತ್ತು ಜಿಲ್ಲಾ ಸ್ವಿಪ್ ಸಮಿತಿಯ ನಿರ್ಲಕ್ಷತನವೇ ಕಾರಣ ಎಂದು ರೈತ ಮುಖಂಡ ರವಿಂದ್ರಗೌಡ ಎಫ್ ಪಾಟೀಲ ಆರೋಪಿಸಿದ್ದಾರೆ.
ಅವರು ಇಂದು ಮುಷ್ಟೂರು ಗ್ರಾಮದ ಹೊರ ವಲಯದಲ್ಲಿ ಬೀಡಬಿಟ್ಟಿರುವ ಅಲೆಮಾರಿಗಳ ಬಗ್ಗೆ ಚರ್ಚಿಸಿ ಮತದಾನ ಮಹತ್ವದ ಬಗ್ಗೆ ಅರವು ಮೂಡಿಸಿ ತಮ್ಮ ತಮ್ಮ ಗ್ರಾಮಕ್ಕೆ ತೆರಳಿ ಮತದಾನದಲ್ಲಿ ಪಾಲ್ಗೊಳ್ಳುವಂಥ ಕಾರ್ಯ ಮಾಡಿದ್ದು ವಿಶೇಷವಾಗಿತ್ತು. ಮತದಾನದ ದಿನಾಂಕ ಮತದಾನದ ಮಹತ್ವ ಅರಿಯದೆ ಬಿಡಾರದಲ್ಲೇ ತಂಗಿದ್ದ ಸುಮಾರು 150 ಕ್ಕೂ ಹೆಚ್ಚು ಜನರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ಮತದಾನದಲ್ಲಿ ಪಾಲ್ಗೊಳ್ಳುವ ಹೊರಟು ನಿಂತಿದ್ದ ಪ್ರಯತ್ನಕ್ಕೆ ಫಲ ಸಿಕ್ಕಂತಾಯಿತು ಎಂದು ಪಾಟೀಲರು ಈ ಕೆಲಸವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಸ್ವಿಪ್ ಸಮಿತಿಯವರು, ಆರ್.ಓ, ಎ.ಆರ್.ಓ ರವರು ಮಾಡಬೇಕಾದದ್ದು ಅವರ ಕರ್ತವ್ಯ ಅಧಿಕಾರಿಗಳ ನಿರ್ಲಕ್ಷದಿಂದಲೇ ಮತದಾನದ ಶೇಖಡವಾರು ಪ್ರಮಾಣ ಕಡಿಮೆಯಾಗುತ್ತಿದೆ, ಬರಗಾಲ ಮತ್ತು ಅನರಕ್ಷತೆಯಂಥ ಪರಿಸ್ಥಿತಿಗಳು ಇಂಥ ಅವಗಡಕ್ಕೆ ಗುಳೇ ಹೋಗಲಿಕ್ಕೆ ಕಾರಣ, ಅಧಿಕಾರಿಗಳು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ರವೀಂದ್ರಗೌಡ ಎಫ್. ಪಾಟೀಲ ಎಚ್ಚರಿಸಿದ್ದಾರೆ.