ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ : ಶೆಟ್ಟರ
ಗುಳೇದಗುಡ್ಡ 07: ಯಾವುದೇ ಸಮಾಜಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕೆಂದರೆ ಶಿಕ್ಷಣದ ಅಗತ್ಯತೆ ತುಂಬಾ ಇದೆ. ಶಿಕ್ಷಣ ಹೊಂದುವುದರಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದು ಇಲ್ಲಿನ ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ ಹೆಳಿದರು.
ಅವರು ಪಟ್ಟಣದ ಸಂಗೊಂದಿ ಓಣಿಯಲ್ಲಿ ಶ್ರೀರಾಮ ವಾಲ್ಮೀಕಿ ಸೇವಾ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಾರುತೇಶ್ವರ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜವು ಮಕ್ಕಳಿಗೆ ಶಿಕ್ಷಣ ನೀಡುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಸಮಾಜದ ಜನ ಸುಶಿಕ್ಷಿತರಾದಂತೆ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ದೇವಸ್ಥಾನ ಲೋಕಾರೆ್ಣ ಮಾಡಿ ಮಾತನಾಡಿದರು.
ಸಂಜಯ ಬರಗುಂಡಿ, ಶ್ರೀನಿವಾಸ ಇನಾನಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಪುರಸಭೆ ಸದಸ್ಯರಾದ ಉಮೇಶ ಹುನಗುಂದ, ಯಲ್ಲಪ್ಪ ಮನ್ನಿಕಟ್ಟಿ, ವಿನೋದ ಮದ್ದಾನಿ, ವಿಠ್ಠಲ ಕಾವಡೆ, ಮುಖಂಡರಾದ ರಾಮಣ್ಣ ಚಂದರಗಿ, ಭೀಮಪ್ಪ ತಳವಾರ, ರಾಮಣ್ಣ ಆಡಗಲ್, ನಾಗಪ್ಪ ತಳವಾರ, ಶಿವಪ್ಪ ಸಂಗೊಂದಿ, ಶಿವಾನಂದ ಕಬ್ಬಲಗೇರಿ ಸೇರಿದಂತೆ ಇತರರು ಇದ್ದರು.