ಸಿಂಧಗಿ

ಅಕಾಲಿಕ ಮಳೆಯಿಂದ ಸಂಪೂರ್ಣ ದ್ರಾಕ್ಷಿ ಬೆಳೆ ನಾಶ

ಅಕಾಲಿಕ ಮಳೆಯಿಂದ ಸಂಪೂರ್ಣ ದ್ರಾಕ್ಷಿ ಬೆಳೆ ನಾಶ

ಸಿಂದಗಿ24; ಮೊಡು ಮುಸಿಕಿದ ವಾತಾವರಣ ಕಳೆದ ನಾಲ್ಕು ದಿನಗಳ ಹಿಂದೆ ಮತ್ತು ಮಂಗಳವಾರ ಮತ್ತು ಬುಧವಾರ ತಡರಾತ್ರಿ 1:30 ಗಂಟೆಗೆ ಸುರಿದ ಅಕಾಲಿಕೆ ಮಳೆಯು ರೈತರನ್ನು ಸಂಕಷ್ಟದಲ್ಲಿಟ್ಟಿತು. ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದ ದ್ರಾಕ್ಷಿ ಹಾನಿಯಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ರೈತರ ಪರಿಸ್ಥಿತಿ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕಿನ ರೈತರದ್ದಾಗಿದೆ. 

ಅಂದಾಜು 615 ಹೆಕ್ಟರ ದ್ರಾಕ್ಷಿ ಬೆಳೆಯಲಾಗಿದೆ. ಅಕಾಲಿಕ ಮಳೆಯಿಂದ ಸಂಪೂರ್ಣ ದ್ರಾಕ್ಷಿ ಹಾಳಾಗಿದೆ.  

ಶನಿವಾರ ರಾತ್ರಿ ಆಲಿಕಲ್ಲು ಮಳೆಯಿದಾಗಿ ಒಣದ್ರಾಕ್ಷಿ ತೋಯ್ದು ಹಾಳಾಗಿದೆ. ಕೆಲವೆಡೆ ದ್ರಾಕ್ಷಿ ತೋಟಗಳ ಕಂಬಗಳು ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. 

ಲಾಕ್‌ಡೌನ್ ಪರಿಣಾಮ, ಮಾರಾಟ ಮಾಡಲಾಗದೆ ಉಳಿದ ದ್ರಾಕ್ಷಿಯನ್ನು ರೈತರು ಒಣ ದ್ರಾಕ್ಷಿ ಮಾಡುತ್ತಿದ್ದಾರೆ. ಶೆಡ್‌ಗಳಿಗೆ ಹಾಕಿದ್ದ ಪ್ಲಾಸ್ಟಿಕ್ ಭಾರಿ ಗಾಳಿಗೆ ಹರಿದುಹೋಗಿದ್ದರಿಂದ ದ್ರಾಕ್ಷಿಗೆ ನೀರು ಬಿದ್ದು ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ. 

ನಮ್ಮ ಎರಡುವರೆ ಎಕರೆ ದ್ರಾಕ್ಷಿ ಸಂಪೂರ್ಣ ಹಾಳಾಗಿದೆ. ತುಂತುರು ಮಳೆಯಿಂದ ದ್ರಾಕ್ಷಿ ಕಾಳುಗಳು ಉದುರುವಿಕೆ ಹಾಗೂ ಕೊಳೆ ರೋಗ ಆವರಿಸಿದೆ. ಎರಡು ವರ್ಷ ಕೊರೊನಾ ಹೊಡೆತದಿಂದ ನಷ್ಟ ಅನುಭವಿಸಿದ್ದೆವು. ಈಗ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ತಾಲೂಕಿನ ಕನ್ನೊಳ್ಳಿ ಗ್ರಾಮದ ರೈತ ಗುರುಬಸಪ್ಪ ಶಹಾಪೂರ ಪತ್ರಿಕೆಗೆ ತಿಳಿಸಿದರು. 

ತಾಲೂಕಿನಲ್ಲಿ ಆಗುತ್ತಿರುವ ಮಳೆಯಿಂದ ಬೆಳೆದ ದ್ರಾಕ್ಷಿ ಬೆಳೆ ಹಾಳಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ನಮ್ಮ ಇಲಾಖೆಯ ಅಧಿಕಾರಿಗಳಿಂದ ಹೊಬಳಿವಾರು ದ್ರಾಕ್ಷಿ ಬೆಳೆ ಹಾನಿ ಸಮೀಕ್ಷೆ ಮಾಡಿಲಾಗುತ್ತಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ತಿಳಿಸಿದ್ದಾರೆ. 


ಸುದ್ದಿ ಓದಿ