ವಿದ್ಯುತ್ ಪ್ರತಿನಿಧಿಗಳಿಗೆ ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಆಗ್ರಹ
ಬೈಲಹೊಂಗಲ 04: ಕೋವಿಡ್ 19 ರೋಗ ಎಲ್ಲೆಡೆ ಹರಡುತ್ತಿರುವ ಕಾರಣ ಹೆಸ್ಕಾಂ ವಿದ್ಯುತ್ ನಿಗಮದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೆ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಾರ್ಯಪಾಲನಾ ವಿಭಾಗದ ಕಾರ್ಯ ನಿವರ್ಾಹಕ ಅಭಿಯಂತರಿಗೆ ಮಂಗಳವಾರ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನವಿ ಸಲ್ಲಿಸಿದರು.ಹೆಸ್ಕಾಂ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಕೊರೋನಾ ಮಹಾಮಾರಿ ಹಬ್ಬುತ್ತಿರುವ ಕಾರಣ ವಿದ್ಯುತ್ ಬಿಲ್ ಕೇಳಲು ಹೋದಾಗ ಯಾರಿಗೆ ಕರೋನಾ ಇದೆ ಎಂಬುದು ಗೊತ್ತಾಗುವದಿಲ್ಲ. ಗ್ರಾಮ ವಿದ್ಯುತ್ ಪ್ರತಿನಿಧಿಗೆ ಪಾಸಿಟಿವ್ ಬಂದರೆ ಎಲ್ಲ ಗ್ರಾಮಸ್ಥರಿಗೆ ತಗುಲುವ ಸಾಧ್ಯತೆ ಇದೆ. ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ಸಾಕಷ್ಟು ಜನ ಕರೋನಾ ತಗುಲಿ ಮೃತಪಟ್ಟಿದ್ದು ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ವೇತನ ಸಹಿತ ರಜೆ ನೀಡಿದಂತೆ ಈ ಬಾರಿಯೂ ನೀಡಬೇಕು.
ಒಂದು ವೇಳೆ ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಸೇವಾ ಭದ್ರತೆ ನೀಡಿ ಕಂದಾಯ ವಸೂಲಾತಿಗೆ ಅನುಮತಿಸುವದಾದರೆ ಬೈಲಹೊಂಗಲ ಎಲ್ಲ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸಿದ್ದರಿದ್ದೇವೆಂದು ಮನವಿಯಲ್ಲಿ ತಿಳಿಸಲಾಗಿದೆ.ಮಲ್ಲಿಕಾಜರ್ುನ ಕಲಾದಗಿ, ಎಸ್. ಪಿ. ಪಾಟೀಲ, ಎಂ. ಎಫ್ ಅಮಟೂರ, ಎ.ಎನ್.ಬಂದಕ್ಕನವರ್, ಎಸ್.ವಿ.ಬಾಳಿಗಾ, ಎಸ್.ಬಿ.ಲಂಗೋಟಿ, ಆರ್.ಡಿ.ಉಪಾಧ್ಯೆ, ಎಂ.ಬಿ.ಇಂಚಲ, ಎಸ.ಬಿ. ಪಾಟೀಲ, ಎ. ಎನ್. ಮುಲ್ಲಾ, ಪಿ .ವಿ.ತಮ್ಮನವರ್, ಬಳಿಗಾರ್, ಪೂಜೇರ ಹಾಗೂ ಧೂಪದಾಳ, ಮುನವಳ್ಳಿ, ಯರಗಟ್ಟಿ, ಸವದತ್ತಿ ತಾಲೂಕಿನ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಇದ್ದರು.ಬೈಲಹೊಂಗಲ-ಕೋವಿಡ್ 19 ರೋಗ ಎಲ್ಲೆಡೆ ಹರಡುತ್ತಿರುವ ಕಾರಣ ಹೆಸ್ಕಾಂ ವಿದ್ಯುತ್ ನಿಗಮದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೆ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಾರ್ಯಪಾಲನಾ ವಿಭಾಗದ ಕಾರ್ಯ ನಿವರ್ಾಹಕ ಅಭಿಯಂತರಿಗೆ ಮಂಗಳವಾರ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನವಿ ಸಲ್ಲಿಸಿದರು