ದೇಶದ ಒಟ್ಟು ಸಾಲ 2020ರ ಸೆಪ್ಟೆಂಬರ್ ಕೊನೆಗೆ 107.04 ಲಕ್ಷ ಕೋಟಿ ರೂ.
ನವದೆಹಲಿ, ಡಿಸೆಂಬರ್ 31:ದೇಶದ ಸಾಲ 2020ರ ಸೆಪ್ಟೆಂಬರ್
ಕೊನೆಯ ವೇಳೆಗೆ 107.04 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಇದಕ್ಕೂ
ಮೊದಲು ಸಾಲದ ಪ್ರಮಾಣ 2020ರ ಜೂನ್ ಕೊನೆಗೆ 101.3 ಲಕ್ಷ ಕೋಟಿ ರುಪಾಯಿ ಇತ್ತು ಎಂದು ಬುಧವಾರ ಸಾರ್ವಜನಿಕ
ಸಾಲದ ಲೆಕ್ಕಾಚಾರದ ಮಾಹಿತಿ ಬಹಿರಂಗ ಪಡಿಸಿದೆ.
ಪ್ರಸಕ್ತ
ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು
3,46,000 ಕೋಟಿ ರುಪಾಯಿ ಮೌಲ್ಯದ ಸೆಕ್ಯೂರಿಟೀಸ್ ವಿತರಣೆ ಮಾಡಿದ್ದು, ಇನ್ನು ಕೇಂದ್ರ ಸರ್ಕಾರದಿಂದ ಸಾಲ ಪಡೆಯುವ ಗುರಿಯನ್ನು
12 ಲಕ್ಷ ಕೋಟಿ ರುಪಾಯಿಗೆ ಪರಿಷ್ಕರಿಸಲಾಗಿದೆ ಎಂದೂ
ವರದಿಯಾಗಿದೆ.