ಉದ್ಯೋಗ ಕ್ಷೇತ್ರದಲ್ಲಿ ಬಣಜಿಗ ಸಮುದಾಯದ ಕೊಡುಗೆ ಅಪಾರ: ರೋಡಗಿ
ಇಂಡಿ: ವ್ಯಾಪಾರ, ಶಿಕ್ಷಣ, ಉದ್ಯಮ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬಣಜಿಗ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ರೋಡಗಿ ಹೇಳಿದರು.
ಗುರುವಾರ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಬಣಜಿಗ ಕ್ಷೇಮಾಭಿವೃದ್ದಿ ಸಂಸ್ಥೆಯ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕಾ ಬಣಜಿಗ ಸಮಾವೇಶ ಮತ್ತು ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಶೋಧಕ ಡಾ.ಎಸ್.ಕೆ.ಕೊಪ್ಪ ಮಾತನಾಡಿ ಸಮಾಜದ ಅಭಿವೃದ್ಧಿಯ ದೂರದೃಷ್ಟಿಯಿಂದ ಬಣಜಿಗ ಸಮಾಜ ಶಿಕ್ಷಣ ಸಂಸ್ಥೆಗಳನ್ನು ಕೊಡುಗೆಯಾಗಿ ನೀಡಿದ್ದು ಸರಕಾರದ ಮಾಡದ ಸಾಧನೆ ಉತ್ತರ ಕರ್ನಾಟಕದಲ್ಲಿ ಬಣಜಿಗ ಸಮಾಜ ಮಾಡಿದೆ ಎಂದರು. ಸಾನಿಧ್ಯ ವಹಿಸಿದ ಅರ್ಜುಣಗಿಯ ರೇಣುಕಾ ಶಿವಾಚಾರ್ಯರರು,ಇಂಡಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಸುನೀಲ ರಬಶೆಟ್ಟಿ, ವಿಜಯಕುಮಾರ ಧನಾಶ್ರೀ ಮಾತನಾಡಿದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಕ್ಕೂಟದ ಕಾರ್ಯದರ್ಶಿ ಬಸವರಾಜ ಸಾಹುಕಾರ ಕುಮಸಗಿ, ಚೆನ್ನುಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ ಎಸ್.ಜಿ.ಕಕ್ಕಳಮೇಲಿ, ಸೋಮಶೇಖರ ಸುರಪುರ, ಮುತ್ತು ದೇಸಾಯಿ, ಪ್ರಭುಲಿಂಗ ಕತ್ತಿ, ಜಿ.ಜಿ.ಬರಡೋಲ, ಬಸವರಾಜ ನಿಚ್ಚಳ, ಈರಣ್ಣ ಉಪ್ಪಿನ, ಶಿವಾನಂದ ಅಂಗಡಿ, ಅದೃಷ್ಟಪ್ಪಾ ವಾಲಿ ಮತ್ತಿತರಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷರಾಗಿ ರೋಡಗಿ ಗ್ರಾಮದ ಚೆನ್ನುಗೌಡ ಪಾಟೀಲ ಇವರನ್ನು ಅವಿರೋಧ ಆಯ್ಕೆ ಮಾಡಿದರು.