ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ: ಬಿರಾದಾರ
ಇಂಡಿ: ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಆರ್ಯಭಟ, ಭಾಸ್ಕರಾಚಾರ್ಯ, ರಾಮಾನುಜನ್ ನಂತರ ಶ್ರೇಷ್ಟ ಗಣಿತತಜ್ಞರು ಭಾರತದ ಕೀರ್ತಿ ಜಗತ್ತಿನಾದಂದಂತ ಪಸರಿಸಿದರು ಎಂದು ಗಣಿತಶಾಸ್ತ್ರ ವಿಷಯದ ಉಪನ್ಯಾಸಕ ಪ್ರವೀಣಕುಮಾರ ಬಿರಾದಾರ ಹೇಳಿದರು.
ಅವರು ಬುಧವಾರ ಪಟ್ಟಣದ ಗುಲಾಬಚಂದ ಗಾಂಧಿ ಕಲಾ, ಯಶವಂತಗೌಡ ಪಾಟೀಲ ವಾಣಿಜ್ಯ ಮತ್ತು ಮಾಣಿಕಲಾಲ ದೋಶಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಗಣಿತ ದಿನಾಚರಣೆಯಲ್ಲಿ ಮಾತನಾಡಿದರು.
ಮಹಾಮೇಧಾವಿ, ಭಾರತದ ಶ್ರೇಷ್ಟ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ ಬದುಕ್ಕಿದ್ದು ಮಾತ್ರ ಅತ್ಯಲ್ಪ ಕಾಲ, ಆದರೆ ಗಣಿತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮಿಂಚಿ ಮರೆಯಾದ ಉಜ್ವಲ ತಾರೆ. ರಾಮಾನುಜರ ಗಣಿತ ಸೂತ್ರಗಳು ಪಾಲಿಮರ್ ಕೆಮೆಸ್ಟ್ರೀ, ಸಾಫ್ಟವೇರ್ ಡೆವಲಪಮೆಂಟ್ ಮತ್ತು ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ . ಹೀಗಾಗಿ ರಾಮಾನುಜಂ ಜನ್ಮ ದಿನವನ್ನು ಗಣಿತ ದಿನವನ್ನಾಗಿ ಜಗತ್ತಿದಾದಂತಹ ಆಚರಿಸುತ್ತಾರೆ. ಅಂತಹ ಶ್ರೇಷ್ಠ ಗಣಿತ ತಜ್ಞರನ್ನು ಭಾರತ ಪಡೆದು ಗಣಿತ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದೆ ಎಂದರು.
ಪ್ರಾಚಾರ್ಯ ಎಸ್.ಬಿ.ಜಾಧವ, ಉಪನ್ಯಾಸಕಿಯಾದ ಶ್ರೀಮತಿ ಸುಮಾ ಪಾಟೀಲ, ಡಾ.ಸುರೇಂದ್ರ ಕೆ ಮಾತನಾಡಿದರು.
ಡಾ.ಪಿ.ಕೆ.ರಾಠೋಡ, .ಶ್ರೀಕಾಂತ ರಾಠೋಡ, ಮಲ್ಲಕಾರ್ಜುನ ಕೋಣದೆ, .ಆರ್.ಪಿ.ಇಂಗನಾಳ, ಎಸ್‌ಎಸ್ ಹೂಗಾರ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು.