ಗುತ್ತಿಗೆದಾರರು ಕಾಣೆ ರಸ್ತೆ ಕಾಮಗಾರಿ ಅಸಂಪೂರ್ಣ : ಶರಣಪ್ಪ ವಾಲಿಕಾರ
ಇಂಡಿ: ಇಂಡಿ ತಾಲೂಕಿನ ಝಳಕಿ ಗ್ರಾಮದಿಂದ ವಿಜಯಪುರ ಮತ್ತು ಸೋಲಾಪೂರ ಮಾರ್ಗದ ಮಧ್ಯ ಸೇವಾ ರಸ್ತೆಗಳು ಸಂಪೂರ್ಣವಾಗಿ ಕಾಮಗಾರಿ ಮುಗಿಸದೆ ಇಲ್ಲಿನ ಗುತ್ತಿಗೆದಾರರು ಕಾಣೆಯಾಗಿದ್ದಾರೆ ಎಂದು ಝಳಕಿ ಗ್ರಾ.ಪಂ ಅಧ್ಯಕ್ಷ ಶರಣಪ್ಪ ವಾಲಿಕಾರ ಆರೋಪಿಸಿದ್ದಾರೆ.
ಸುಮಾರು ಮೂರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 52 ಕಾರ್ಯ ನಡೆದಿದ್ದು ಇಲ್ಲಿನ ಏಜಿಎಮ್ ಕಂಪನಿ ಝಳಕಿ ಗ್ರಾಮದ ಸೇವಾ ರಸ್ತೆಗಳ ಕಾರ್ಯವನ್ನು ಅರ್ಧ ಮರ್ಧಮಾಡಿ ಸುಮಾರು ದಿನಗಳಿಂದ ಇತ್ತ ನೋಡುತ್ತಿಲ್ಲ, ಗ್ರಾಮದ ಜನರು ರಸ್ತೆ ಪಕ್ಕದಲ್ಲಿ ಮನೆಗಳಿಂದ ಹೊರಗಡೆ ತೆರಳಲು ಸರೀಯಾದ ಚರಂಡಿಗಳಿಗೆ ಹೊದಿಕೆ ಕಾರ್ಯ ಮುಗಿಸದೆ ಬಿಟ್ಟಿರುವದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಗ್ರಾಮ-ಪಂಚಾಯತಿಗೆ ಬಂದು ದೂರು ನಿಡ್ಡಿದ್ದರಿಂದ ಗುತ್ತೀಗೆದ್ದಾರರು ಕಾಮಗಾರಿ ಬೇಗನೆ ಮಾಡಬೇಕೆಂದು ಹೇಳಿದರು.
ಅಧಿಕಾರಿಗಳು ಇತ್ತಕಡೆ ಗಮನಹರಿಸಿ ಒಳ ಚರಂಡಿಯಲ್ಲಿ ಸಾರ್ವಜನಿಕರು ಕಾಲುಜಾರಿ ಬಿದ್ದು ಕೈಕಾಲು ಮುರಿದು ಕೊಂಡ ಘಟನೆ ನಡದಿದೆ. ಇನಾದರು ಗುತ್ತಿಗೆದ್ದಾರರು ಮತ್ತು ಅಧಿಕಾರಿಗಳು ಗಮನಹರಿಸಿ ಕಾಮಗಾರಿ ಪೂರ್ಣ ಮುಗಸಿ ಎಂದು ಒತ್ತಾಯಿಸಿದ್ದಾರೆ.