ಸೇತುವೆ ಕಾಮಗಾರಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ವೀಕ್ಷಣೆ
ಲೋಕದರ್ಶನ ವರದಿ
ಕಾಗವಾಡ 30: ಕಾಗವಾಡ ತಾಲುಕಿನ ಜುಗುಳ-ಖಿದ್ರಾಪುರ ಮಧ್ಯದ ಕೃಷ್ಣಾ ನದಿಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಚಿಕ್ಕೋಡಿ ಲೋಕಸಭಾ ಮಾಜಿ ಸಂಸದರು ಪ್ರಕಾಶ ಹುಕ್ಕೇರಿ ಇವರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಶನಿವಾರ ರಂದು ಮಾಜಿ ಸಂಸದರು ಪ್ರಕಾಶ ಹುಕ್ಕೇರಿ ಇವರು ಸೇತುವೆ ಕಾವಗಾರಿ ವೀಕ್ಷಣೆ ಮಾಡಿದರು ಕಾಮಗಾರಿಗೆ ಅತಿ ವೇಗದಲ್ಲಿ ಪ್ರಾರಂಭವಾಗಿದ್ದರಿಂದ ಸಂತಸ ವ್ಯಕ್ತಪಡಿಸಿದರು.
ಬರುವ ಮಳೆಗಾಲದಲ್ಲಿ ಇದೆ ಸೇತುವೆ ಮೇಲ್ಲಿಂದ ಸಂಚಾರ ಸೇವೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಜಯಕುಮಾರ್ ಅಕಿವಾಟೆ, ಗ್ರಾಪಂ ಸದಸ್ಯ ಉಮೇಶ್ ಪಾಟೀಲ್, ಮಾಜಿ ಗ್ರಾಪಂ ಅಧ್ಯಕ್ಷ ಸಂಜಯ ಮಿಂಚೆ, ಮುದ್ದು ಗಡ್ಕರಿ, ಮಲ್ಲಪ್ಪ ಮಿಂಚೆ ಸೇರಿದಂತ್ತೆ ಅನೇಕರು ಇದ್ದರು.