ಅತ್ಯುತ್ತಮ ಕೆಲಸ ಮಾಡುವುದರಿಂದ ಶ್ರೇಷ್ಠ ಫಲ: ಎ ಅಬ್ದುಲ್ ನಬಿ
ಸಿರುಗುಪ್ಪ 04: ಸಾಮಾನ್ಯ ಕೆಲಸವಾದರೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಫಲ ದೊರೆಯುತ್ತದೆ ಎಂದು ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಸಾಕ್ಷರತಾ ಸದಸ್ಯರು ಸಾಮಾಜಿಕ ಸುಧಾರಕ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರ 139ನೇ ಜನ್ಮದಿನ ವನ್ನು ವಕೀಲರ ದಿನವನ್ನಾಗಿ ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡುತ್ತಾ ಡಾ ರಾಜೇಂದ್ರ ಪ್ರಸಾದ್ ಸ್ವತಂತ್ರ ಭಾರತದ ಮೊದಲನೆಯ ರಾಷ್ಟ್ರಪತಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜ ಸೇವಕರಾಗಿ ಮಹತ್ವದ ಸೇವೆ ನೀಡಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅನುಯಾಯಿಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಸದಾ ಹಂಬಲಿಸುತ್ತಿದ್ದರು ಭಾಷಣ ಮತ್ತು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಲು ಶ್ರಮ ವಹಿಸುತ್ತಿದ್ದರು ಕೈ ತುಂಬಾ ವರಮಾನ ತರುತ್ತಿದ್ದ ವಕೀಲರ ವೃತ್ತಿಯನ್ನು ತ್ಯಜಿಸಿದರು 1948 ರಿಂದ1950ರವರೆಗೆ ಭಾರತ ಗಣರಾಜ್ಯದ ಸಂವಿಧಾನ ರಚಿಸಿದ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಸ್ವಾತಂತ್ರ್ಯ ಭಾರತದ ಮೊದಲ ಸರ್ಕಾರದಲ್ಲಿ ಸಂಕ್ಷಿಪ್ತವಾಗಿ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದರು 3 ಡಿಸೆಂಬರ್ 1884 ರಲ್ಲಿ ಬಿಹಾರದ ಜೆರದೈ ನಲ್ಲಿ ಜನಿಸಿದ್ದರು . ತಂದೆ ಮಹಾದೇವ ಸಹಾಯ ಸಂಸ್ಕೃತ ಮತ್ತು ಪಾರ್ಸಿ ವಿದ್ವಾಂಸರು ಹಾಗೂ ವೈದ್ಯರು ತಾಯಿ ಕಮಲೇಶ್ವರಿ ದೇವಿ ಸಂಪ್ರದಾಯ ದೈವ ಭಕ್ತಿ ಇಬ್ಬರು ಗಂಡು ಮೂವರು ಹೆಣ್ಣು ಮಕ್ಕಳ ಕುಟುಂಬ ಬಡವ ಬಲ್ಲಿದ ಹಿಂದೂ ಮುಸ್ಲಿಂ ಮುಂತಾದ ಯಾವ ಭೇದಭಾವವಿಲ್ಲದೆ ಆಡಂಬರ ಹಿತವಾದ ಜನರ ಒಡನಾಟದಲ್ಲಿ ಬೆಳೆದ ರಾಜೇಂದ್ರ ಪ್ರಸಾದ್ ಅವರು ಉಚ್ಚ ಆದರ್ಶ ನೈತಿಕ ನಡುವಳಿಕೆ ಸ್ವಭಾವ ಮೈಗೂಡಿಸಿಕೊಂಡವರು 12ನೇ ವಯಸ್ಸಿನಲ್ಲಿ ರಾಜೇಂದ್ರ ಪ್ರಸಾದ್ ಬನ್ಸಿದೇವಿ ಅವರೊಂದಿಗೆ ವಿವಾಹ ಆಯಿತು ಜನಹಿತ ಕಾರ್ಯಗಳಿಂದ ಎಲ್ಲರಿಗೂ ಜನರ ಪ್ರೀತಿಗೆ ಸಾಕ್ಷಿಯಾಗಿದ್ದರು 28 ಫೆಬ್ರವರಿ1963 ರಂದು ಮರಣ ಹೊಂದಿದರು ಸ್ವಾತಂತ್ರ್ಯ ಹೋರಾಟಗಾರರಾಗಿ ರಾಷ್ಟ್ರಪತಿಯಾಗಿ 1950 ರಿಂದ 12 ವರ್ಷ ರಾಷ್ಟ್ರಪತಿಗಳಾಗಿ ನಂತರ ಅವರು ನಿವೃತ್ತಿ ಹೊಂದುವ ನಿರ್ಧಾರವನ್ನು ಘೋಷಿಸಿದ ಮತ್ತು ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಉತ್ತರಾಧಿಕಾರಿಯಾದರು ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ್ ರತ್ನ ಪ್ರಶಸ್ತಿಯನ್ನು ನೀಡಲಾಯಿತು ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನದ ನೆನಪಿಗಾಗಿ ಭಾರತದಲ್ಲಿ ವಕೀಲರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಅಬ್ದುಲ್ ನಬಿ ವಿವರಿಸಿ ಹೇಳಿದರು . ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ , ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಡಿ ಹಾಶಿಮ್, ಜಹಿರುದ್ದೀನ್ ಬಾಬು, ಹಾಜಿ ಮೊಹಮ್ಮದ್ ಇಬ್ರಾಹಿಂ , ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ ,ಡಾ ಮೊಹಮ್ಮದ್ ಅಲಿ, ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಅಲ್ಪಸಂಖ್ಯಾತ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಬಿಕೆ ಅಲ್ಲಾಭಕ್ಷಿ, ಸಾಕ್ಷರತಾ ಕ್ಷೇತ್ರ ಗೌರವ ಸಂಯೋಜಕ ಜೆ ನಾಗೇಂದ್ರ ಗೌಡ ,ಹಂಡಿ ಹುಸೇನ್ ಸಾಬ್ ಮೊದಲಾದವರಿದ್ದರು.