ಅರ್ಚಕರ ಮಧ್ಯ,ಕಮಿಟಿಯ ನಡುವೆ ಭುಗಿಲೆದ್ದನು ಇಥ್ಯರ್ತಗೊಳಿಸಿದ ತಹಶೀಲ್ದಾರ
ಲೋಕದರ್ಶನ ವರದಿ,
ಜಮಖಂಡಿ 22: ತಾಲೂಕಿನ ಹುಲ್ಯಾಳ ಗ್ರಾಮದಲ್ಲಿನ ಮಾರುತಿ ದೇವಸ್ಥಾನದ ಅರ್ಚಕರು ಮತು ಟ್ರಸ್ಟ್ ಕಮಿಟಿ ಎಂದು ಹೇಳಿಕೊಳ್ಳುವವರ ಮಧ್ಯದಲ್ಲಿ ಸುಮಾರು ತಿಂಗಳಿನಿಂದ ಎದ್ದಿರುವ ವಿವಾದವನ್ನು ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರು ಅಲ್ಪ ಪ್ರಮಾಣದಲ್ಲಿ ಇತ್ಯರ್ಥಗೊಳಿಸಿರುವ ಘಟನೆ ನಡೆಯಿತು.
ಹುಲ್ಯಾಳ ಗ್ರಾಮದ ಮಾರುತಿ ಮಂದಿರದಲ್ಲಿನ ವಂಶ ಪರಂಪರೆವಾಗಿ ಬಂದಿರುವ ಅರ್ಚಕರ ಸಮೂಹವನ್ನು ಗ್ರಾಮದ ಕೆಲವು ಜನರು ಕಳೆದ 20 ವರ್ಷದ ಹಿಂದೆ ಒಂದು ಟ್ರಸ್ಟ ರಚಿಸಿ ಅದರಿಂದ ಜಾತ್ರಾ ಮಹೋತ್ಸವವನ್ನು ನಡೆಸುತ್ತಿದ್ದರು. ಇದರಿಂದ ಅರ್ಚಕ ಸಮೂಹಕ್ಕೆ ತೊಂದರೆಯಾಗುತ್ತಿತ್ತು. ಅದನ್ನು ನಿಲ್ಲಿಸಲು ಕೇಳಿದರೂ ಹೊಸದಾಗಿ ರಚನೆಯಾದ ಟ್ರಸ್ಟ್ನವರು ಮತ್ತೇ ಜಾತ್ರಾ ರಸೀದಿ ಮಾಡುತ್ತಿದ್ದು. ಅದರ ಜೊತೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಈ ಎಲ್ಲ ವಿವಾದಕ್ಕೆ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಅಲ್ಪ ಪ್ರಮಾಣದಲ್ಲಿ ಇತ್ಯರ್ಥಗೊಳಿಸಿದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಆರು ತಿಂಗಳು ಕಾಲ ತಹಶೀಲ್ದಾರ ಈ ದೇವಸ್ಥಾನದ ಆಡಳಿತಾಧಿಕಾರಿಯಾಗಿರುತ್ತಾರೆ. ಪ್ರಸ್ತುತ ಟ್ರಸ್ಟಿಗಳ ಹತ್ತಿರವಿದ್ದ ದೇವಸ್ಥಾನದ ಹಣ ಮತ್ತು ದೇವರ ಆಭರಣಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡು ಒಂದು ಬ್ಯಾಂಕಲ್ಲಿ ಸುರಕ್ಷಿತವಾಗಿ ಇಡಲಾಗುವದು. ಅದರ ಜೊತೆಗೆ ಇಲ್ಲಿದ್ದ ಎಲ್ಲ ಹಣವನ್ನು ಒಂದು ಖಾತೆ ತೆರೆದು ಅಲ್ಲಿಂದಲೇ ನಿರ್ವಹಿಸಲಾಗುವದು. ಅದಕ್ಕಾಗಿ ನಮ್ಮ ಓರ್ವ ಸಿಬ್ಬಂದಿಯನ್ನು ನೇಮಿಸಿ ಯಾವದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅದೇ ರೀತಿಯಾಗಿ ಈಗಿದ್ದ ಅರ್ಚಕರೆ ದೇವಸ್ಥಾನದ ಪೂಜಾ ಕೈಂಕರ್ಯವನ್ನು ಯಥಾವತ್ತಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.