ಸಂವಿಧಾನದ ಪೂರ್ವ ಪೀಠಿಕೆಯು ಮಹತ್ವದ ಭಾಗ: ತಳವಾರ
ಶೇಡಬಾಳ 26: ಸಂವಿಧಾನದ ಪೂರ್ವ ಪೀಠಿಕೆಯು ಮಹತ್ವದ ಭಾಗವಾಗಿದ್ದು ಇಡೀ ಸಂವಿಧಾನದ ತಿರುಳೇ ಅದರಲ್ಲಿ ಅಡಕವಾಗಿದೆ ಎಂದು ಡಾ.ಎಸ್.ಪಿ.ತಳವಾರ ಹೇಳಿದರು.
ಶುಕ್ರವಾರ ದಿ. 26 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸೆಯ ಕೋಶ, ರಾಜ್ಯಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಘಟಕದಡಿಯಲ್ಲಿ ನಡೆದ 'ಸಂವಿಧಾನ ದಿನಾಚರಣೆ' ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಂವಿಧಾನದಲ್ಲಿ ಅಡಕವಾದ, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವೆಂಬ ಪದಗಳು ಭಾರತದ ಎಲ್ಲ ಪ್ರಜೆಗಳನ್ನು ಆರ್ಥಿಕ, ರಾಜಕೀಯ, ಸಾಮಾಜಿಕ ಬದ್ಧತೆಯಿಂದ ಸಬಲರನ್ನಾಗಿಸುವ ಗುರಿಯನ್ನು ಹೊಂದಿವೆ. ಹೀಗಾಗಿ ಸಂವಿಧಾನದ ಪೂರ್ವ ಪೀಠಿಕೆಯು ಮಹತ್ವಪೂರ್ಣವೆನಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿ.ಎಸ್.ತುಗಶೆಟ್ಟಿ ಸಂವಿಧಾನವು ಜನರ ಜೀವನದ ಪ್ರತಿಬಿಂಬವಾಗಿದ್ದು, ಜನರಿಗೆ ತಮ್ಮ ಗುರಿ-ಉದ್ದೇಶಗಳನ್ನು ಈಡೇರಿಸಿ ಕೊಳ್ಳುವÀಲ್ಲಿ ಸಂವಿಧಾನವು ಮಹತ್ವಪೂರ್ಣ ಪಾತ್ರವನ್ನು ವಹಿಸಿದೆ. ಎಂದರು.
ಎನ್.ಎನ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಆರ್.ಎಸ್.ಕಲ್ಲೋಳಿಕರ ಸಂವಿಧಾನದ ಪೂರ್ವ ಪಿಠೀಕೆಯನ್ನು ಬೋಧಿಸಿದರು. ಡಾ.ಎ.ಎಂ.ಜಕ್ಕಣ್ಣವರ ವಂದಿಸಿದರು. ಪ್ರೊ.ಬಿ.ಡಿ.ಧಾಮಣ್ಣವರ ಸ್ವಾಗತಿಸಿದರು. ಆದರ್ಶ ವಿದ್ಯಾರ್ಥಿನಿ ಅಶ್ವಿನಿ ಸೋನಲಕರ ಹಾಗೂ ಪ್ರೇಕ್ಷಾ ಬೆಂಡವಾಡೆ ನಿರೂಪಿಸಿದರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.