ಕಾಗವಾಡ

ಉಗಾರದ ಪದ್ಮಾವತಿ ಆರಾಧನಾ ಮಹೋತ್ಸವ ಇಂದು ಸಮಾರೋಪ

ಉಗಾರದ ಪದ್ಮಾವತಿ ಆರಾಧನಾ ಮಹೋತ್ಸವ ಇಂದು ಸಮಾರೋಪ

ಕಾಗವಾಡ 24: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಸದ್ಭಕ್ತರ ಶುಭಸ್ಥಾನ ಅತಿಶಯಕ್ಷೇತ್ರವಾಗಿರುವ ಉಗಾರದ ಪದ್ಮಾವತಿ ಮಂದಿರದಲ್ಲಿ 7 ನೆ ಆರಾಧನಾ ಮಹೋತ್ಸವ ಸೋಂದಾ ಜೈನ ಮಠದ ಜಗದ್ಗುರು ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶನಿವಾರದ 23ರಂದು ಪ್ರಾರಂಭಗೊಂಡಿದ್ದು ಸೋಮವಾರ ದಿ. 25 ರಂದು ಸಮಾರೋಪಗೊಳ್ಳಲಿದೆ. 

ಉಗಾರದಲ್ಲಿ ಅತಿ ವಿಜೃಂಭಣೆಯಿಂದ “ಶ್ರೀ ಪದ್ಮಾವತಿ ದೇವಿಯ ಬೃಹತ್ ಮಹಾಮಂಡಲ ಆರಾಧನಾ ಮಹೋತ್ಸವ” ಪ್ರಾರಂಭಗೊಂಡಿದೆ ಈ ಸಮಾರಂಭದ ದಿವ್ಯಸಾನಿಧ್ಯ ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳು ವಹಿಸಿಕೊಂಡಿದ್ದಾರೆ. 

ಎಲ್ಲ ವಿಧಿ ವಿಧಾನಗಳು ಸೋಂದಾ ಜೈನ ಮಠದ ಜಗದ್ಗುರು ಅಕಲಂಕಕೇಸರಿ ಭಟ್ಟಾಕಲಂಕ ಸ್ವಾಮೀಜಿ ಇವರ ವಹಿಸಿಕೊಂಡಿದ್ದಾರೆ. 

ಆರಾಧನಾ ಪೂಜಾ ಮಹೋತ್ಸವದ ಮುಖ್ಯ ಯಜಮಾನ ಶೀತಲ್‌ಗೌಡ ಪಾಟೀಲ್ ದಂಪತಿಗಳು ವಹಿಸಿಕೊಂಡಿದ್ದಾರೆ. ಯಜ್ಞನಾಯಕ ಭುಜಗೌಡ ಪಾಟೀಲ್ ದಂಪತಿಗಳು, ಕುಬೇರ ಪೂಜೆಯ ಯಜಮಾನ ವೃಷಭ ಪಾಟೀಲ್ ದಂಪತಿಗಳು, ಸೌಧರ್ಮೆಂದ್ರ ದಂಪತಿಗಳಾಗಿ ಬಾಪುಸಾಹೇಬ್ ಪಾಟೀಲ್ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. 

ವಿಧಾನ ಆಚಾರ್ಯಗಳಗಾಗಿ ಶಾಂತಿನಾಥ್ ಉಪಾಧ್ಯೆ, ಪವನಕುಮಾರ ಉಪಾಧ್ಯೆ, ಸ್ಥಾನಿಕ ಆಚಾರ್ಯರು ಪಾಲ್ಗೊಂಡಿದ್ದಾರೆ. 

ಸೋಂದಾ ಜೈನ ಮಠದ ಜಗದ್ಗುರು ಅಕಲಂಕಕೇಸರಿ ಭಟ್ಟಾಕಲಂಕ ಸ್ವಾಮೀಜಿ ಆರಾಧನಾ ಮಹೋತ್ಸವಬಗ್ಗೆ ಹೇಳುವಾಗ ಉಗಾರ ಅತಿಶಯ ಕ್ಷೇತ್ರವಾದ ಶ್ರೀ ಪದ್ಮಾವತಿ ಅಮ್ಮ ನವರ ಮಂದಿರದಲ್ಲಿ 3.5 ಕೆಜಿ ತೋಕಿನ ಚಿನ್ನದ ಮೂರ್ತಿಗೆ ಮಹಾಭಿಷೇಕ ಮತ್ತು 1008 ಸೌಧರ್ಮಗಳಿಂದ ಆರಾಧನಾ ಪೂಜೆ ಕಾರ್ಯಕ್ರಮ ಜರುಗುತ್ತಿದೆ. ದೇವಿ ಆರಾಧನಾ ಮಾಡುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತಿದ್ದು, ಅನೇಕ ರೋಗ-ರುಜಿಗಳು ದೂರವಾಗುತ್ತಿವೆ. ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ದೂರವಾಗುತ್ತಿದ್ದು ವಿಶ್ವದಲ್ಲಿ ಶಾಂತಿ ಕಾಪಾಡಲು ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. 7ನೇ ಆರಾಧನ ಮಹೋತ್ಸವ ನಿಮಿತ್ಯ ಎಲ್ಲ ಶ್ರಾವಿಕೆಯರು ಪೂಜೆಯಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಕಷ್ಟ ದೂರ ಮಾಡಿಕೊಳ್ಳಲು ಇದು ಒಂದು ಸುಂದರ ಅವಕಾಶವಾಗಿದೆ ಎಂದು ಸ್ವಾಮೀಜಿ ಹೇಳಿದರು. 

ಪದ್ಮಾವತಿ ದೇವಿಯ ಬೃಹತ್ ಆರಾಧನ ಮಹೋತ್ಸವ ಯಶಸ್ವಿಗೊಳಿಸಲು ಅಲಿಯ ಪದ್ಮಾವತಿ ಮಹಿಳಾ ಮಂಡಳಿ ಸದಸ್ಯರು, ಯುವಕರು ವಿಶೇಷವಾಗಿ ಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. 


ಸುದ್ದಿ ಓದಿ