ಠಾಣೆಗೆ ದೂರು ನೀಡಲು ಹೋದ ವ್ಯಕ್ತಿಗೆ ಅಮಾನುಷ್ಯವಾಗಿ ಥಳಿಸಿದ ಪಿಎಸ್ಐ
ಜಮಖಂಡಿ 4: ತಾಲೂಕಿನ ಗದ್ಯಾಳ ಗ್ರಾಮದ ಮಹಾನಿಂಗ ಜಯಪ್ಪ ಕವಟೆಕರ ಸಾವಳಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಪಿಎಸ್ಐ ಗಂಗಾಧರ ಪೂಜಾರಿ ಅಮಾನುಷ್ಯವಾಗಿ ಬಾಸುಂಡೆ ಬರುವ ಹಾಗೆ ಕೈಗಳನ್ನು ಕಟ್ಟಿ ಥಳಿಸಿದ್ದಾರೆಂದು ಜಮಖಂಡಿ ಡಿವಾಯ್ಎಸ್ಪಿ ಕಚೇರಿಯ ಎದುರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೊಂಡಿಕೊಂಡಿದ್ದಾರೆ.
ತಮ್ಮ ಜಮೀನಿನಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಜಾನುವಾರಗಳಿಗೆ ಮೇವು ಮಾಡುತ್ತಿರುವ ಸಮಯದಲ್ಲಿ ಮೂರು ಜನ ಕಾರಿನಿಂದ ಇಳಿದು ಮಹಾನಿಂಗ ಮುಖಕ್ಕೆ ಕರಿ ಬಟ್ಟೆಯನ್ನು ಹಾಕಿ ವಿಜಯಪೂರ ಜಿಲ್ಲೆಯ ಸಿಂದಗಿ ಬೈಪಾಸ ಬಳಿ ತಳ್ಳಿ ಹೋಗಿದ್ದಾರೆ. ಬೇರೆಯವರ ಮೊಬೈಲ್ ತೆಗೆದುಕೊಂಡು ತಮ್ಮ ಮನೆಗೆ ಪೋನ್ ಮಾಡಿದಾಗ ಮನೆಯವರು ತಡರಾತ್ರಿ ಬಂದು ಕರೆದುಕೊಂಡು ಮನೆಗೆ ಬಂದಿದ್ದಾರೆ ಎಂದರು.ಈ ಘಟನೆಯ ಬಗ್ಗೆ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದ ಸಂದರ್ಭದಲ್ಲಿ ಪಿಎಸ್ಐ ಅಮಾನುಷವಾಗಿ ಕೈಗಳನ್ನು ಕಟ್ಟಿ ಮನಬಂದಂತೆ ಥಳಿಸಿದ್ದಾನೆ, ಅಲ್ಲಿಂದ ಗ್ರಾಮದ ಮುಖಂಡರನ್ನು ಕರೆದುಕೊಂಡು ಜಮಖಂಡಿ ಡಿವಾಯ್ಎಸ್ಪಿ ಕಚೇರಿಗೆ ಬಂದು ನಡೆದಿರುವ ಘಟನೆ ಬಗ್ಗೆ ದೂರನ್ನು ಸಲಿಸಿದ್ದಾರೆ.
ಡಿವಾಯ್ಎಸ್ಪಿ, ಶಾಂತವೀರ ಈ, ಸುದ್ದಿಗಾರೊಂದಿಗೆ ಮಾತನಾಡಿ, ಸೆ.14 ರಂದು ಅದೇ ಗ್ರಾಮದ ಮಾಂತೇಶ ಅಥಣ ಎಂಬ ಯುವಕನ ಮೇಲೆ ಇಂತಹ ಘಟನೆ ಸಹ ನಡೆದಿತ್ತು, ನಾಲ್ಕು ಜನ ಬಂದು ಕಾರಿನಲ್ಲಿ ಹಾಕಿಕೊಂಡು ಹಲಗಣಿ ಕ್ರಾಸ್ ಹತ್ತಿರ ಬಿಟ್ಟು ಹೋಗಿದ್ದರು ಎಂಬ ಪ್ರಕರಣ ದಾಖಲಾಗಿತ್ತು, ಈ ಬಗ್ಗೆ ತನಿಖೆ ಕೈಗೊಂಡಾಗ ಯಾವುದೇ ಸುಳಿವು ಸಿಕ್ಕಿಲ್ಲ. ದೂರುದಾರ ಮಹಾನಿಂಗ ನೀಡಿರುವ ದೂರನ್ನು ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುತ್ತೆವೆ ಎಂದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಅಪರಾಧಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಪಿಎಸ್ಐ ಗಂಗಾಧರ ಪೂಜಾರಿ ಅಮಾಯಕನ ಮೇಲೆ ಅಮಾನುಷ್ಯವಾಗಿ ಬಾಸುಂಡೆಗಳು ಬರುವ ಹಾಗೆ ಹೊಡೆದಿದ್ದಾರೆ. ಅವರನ್ನು ಕೂಡಲೇ ಸೇವೆಯಿಂದ ತೆಗೆದುಹಾಕಬೇಕು. ತಪ್ಪಿತಸ್ಥರ ಮತ್ತು ಅವರ ಹಿಂದೆ ಇರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಸಾವಳಗಿ ಪೊಲೀಸ್ ಠಾಣೆಯ ಮುಂದೆ ಪೋಲಿಸರ ವಿರುದ್ಧ ಸತ್ಯಾಗ್ರಹ ಮಾಡಲಾಗುವದು ಎಂದು ಎಚ್ಚರಿಸಿದರು.
ಅಜೇಯ ಕಡಪಟ್ಟಿ, ಗಣೇಶ ಶಿರಗನ್ನವರ, ಶ್ರೀಧರ ಕಂಬಿ ಹಾಗೂ ಗದ್ಯಾಳ ಗ್ರಾಮದ ಗ್ರಾಮಸ್ಥರು ಇದ್ದರು. ಪೋಟೋ : ಜಮಖಂಡಿ ನಗರದ ಡಿಎಸ್ಪಿ ಕಚೇರಿ ಆವರಣದಲ್ಲಿ ಪಿಎಸ್ಐ ಗಂಗಾಧರ ಪೂಜಾರಿ ಅಮಾನುಷ್ಯವಾಗಿ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿರುವ ಗದ್ಯಾಳ ಗ್ರಾಮದ ಮಹಾನಿಂಗ ಜಯಪ್ಪ ಕವಟೆಕರ ಹಾಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ.