ರಾಣೆಬೆನ್ನೂರ

ಮೃತ್ಯುಂಜಯ ಅಪ್ಪಗಳವರ ನೂತನ ರಥೋತ್ಸವ

ಮೃತ್ಯುಂಜಯ ಅಪ್ಪಗಳವರ ನೂತನ ರಥೋತ್ಸವ

ರಾಣೇಬೆನ್ನೂರು 26:ಮೃತ್ಯುಂಜಯ ನಗರದ  ಮುರುಘಾಮಠದ ಶಾಖಾ ಮಠದಲ್ಲಿ, ಮೃತುಂಜಯ ಆಪ್ಪಗಳವರ ಪ್ರಥಮ ಜಾತ್ರಾ ಮಹೋತ್ಸವವು, ಡಾ. ಮಲ್ಲಿಕಾರ್ಜು ನ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸೋಮವಾರ ಅದ್ದೂರಿಯಾಗಿ, ಧಾರ್ಮಿ ಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸಂಜೆ ನೂತನವಾಗಿ ನಿರ್ಮಿಸಲಾದ ಪ್ರಥಮ ರಥೋತ್ಸವವು ಬಹು ವಿಜೃಂಭಣೆಯಿಂದ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

 ಮುಂಜಾನೆ ನಡೆದ ಧಾರ್ಮಿ ಕ ಜಾಗೃತಿ ಸಮಾರಂಭದಲ್ಲಿ ಹಂಸ ಬಾವಿ ಸಿದ್ದಲಿಂಗ ಮಹಾಸ್ವಾಮಿಗಳು, ಲಿಂಗ ನಾಯಕನಹಳ್ಳಿ ಚನ್ನವೀರ ಮಹಾಸ್ವಾಮಿಗಳು,ಅಗಡಿ ಶ್ರೀ ಗುರುಶಿದ್ದ ಮಹಾಸ್ವಾಮಿಗಳು,ಧಾರವಾಡ ಸಚ್ಚಿದಾನಂದ  ದೇವರು,, ಸೇರಿದಂತೆ  ನಾಡಿನ ಅನೇಕ ಹರ -ಗುರು-ಚರ ಮೂರ್ತಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಾಖಾ ಮಠದ ಭಕ್ತ ಮಂಡಳಿಯ, ಎನ್. ಎಸ್. ಪಟ್ಟಣಶೇಟ್ಟಿ,ಜಯಣ್ಣ ಚನ್ನೇಗೌಡ, ಶಿವಯೋಗಿ ಕೂಟ್ಟೋರ,ರಾಜಣ್ಣ ತಿಳುವಳ್ಳಿ, ಶಿವಯೋಗಿ ಕೊಟ್ಟೂರ, ಕೊಟ್ರೆಶಪ್ಪ ಕೊಟ್ಟೂರ, ಕಸ್ತೂರೆಮ್ಮ ಪಾಟೀಲ, ಗಾಯತ್ರಮ್ಮ ಕುರವತ್ತಿ, ವಿಜಯ್ ಕುಮಾರ್ ಇಟಗಿ, ಕೊಟ್ರೇಶಪ್ಪ ಎಮ್ಮಿ,ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು 

ಸುದ್ದಿ ಓದಿ