ಇಂಡಿ

ರಾಷ್ಟ್ರೀಯ ಫೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ರಾಷ್ಟ್ರೀಯ ಫೋಷಣ ಅಭಿಯಾನ ಕಾರ್ಯಕ್ರಮಕ್ಕೆ  ಚಾಲನೆ

ಇಂಡಿ: ಆಹಾರದಲ್ಲಿ ವಿವಿಧ ಪೌಷ್ಟಿಕತೆಯ  ಮಹತ್ವವನ್ನು ವಿವರಿಸಿ ಸಮತೋಲಿತ ಆಹಾರವನ್ನು ಸೇವಿಸಿ ತಮ್ಮ ಆರೋಗ್ಯ ಉತ್ತಮ ರೀತಿಯಲ್ಲಿ ಕಾಪಾಡುವಂತೆ ಸಹಾಯಕ ಮಾರುಕಟ್ಟೆ ವ್ಯವಸ್ಥಾಪಕ ಸಂಗಮೇಶ ಬಿರಾದಾರ ಹೇಳಿದರು. 

ಶನಿವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರ ಇಂಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಫೋಷಣ ಅಭಿಯಾನ ಕಾರ‌್ಯಕ್ರಮದಲ್ಲಿ ಅವರು ಮತನಾಡಿದರು. 

ಕೆವಿಕೆ ಮುಖ್ಯಸ್ಥೆ ಸವಿತಾ ಎಸ್‌. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲಿಚಾರಕಿ ಸಿ.ಎಂ.ಕಾಳೆ, ಡಾ. ಸವಿತಾ ಬಿ ವಿಜ್ಞಾನಿ, ಡಾ. ಸಂತೋಷ ಶಿಂದೆ, ಕೃಷಿ ವಿಜ್ಞಾನ ಕೇಂದ್ರ ಇಂಡಿ ಮಾತನಾಡಿದರು..  

ತರಕಾರಿ, ಹಣ್ಣು, ದ್ವಿದಳ ಮತ್ತು ಏಕದಳ ಧಾನ್ಯ, ಮೊಟ್ಟೆ, ಕೊಬ್ಬಿನ ಪದಾರ್ಥಗಳು ಶೇಂಗಾ, ಗೊಡಂಬಿ, ಬಾದಾಮಿ, ತೆಂಗಿನ ಹಸಿ ಕಾಯಿ  ಇತ್ಯಾದಿ ಪರ್ದಾಥಗಳ ವಸ್ತುಪ್ರದರ್ಶನ ಸಹ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ತರಕಾರಿ ಬೀಜ ಪೊಟ್ಟಣಗಳನ್ನು ಎಲ್ಲರಿಗೂ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆರು, ರೈತರು ಮತ್ತು ರೈತ  ಮಹಿಳೆಯರು  ಒಟ್ಟು  60 ಜನ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು.  


ಸುದ್ದಿ ಓದಿ