ಮನರಂಜನೆ

ಅಕ್ಷಯ ಅಭಿನಯದ ಲಕ್ಷ್ಮಿ ಬಾಂಬ್ ನವೆಂಬರ್ 9ಕ್ಕೆ ಬಿಡುಗಡೆ

ಅಕ್ಷಯ ಅಭಿನಯದ ಲಕ್ಷ್ಮಿ ಬಾಂಬ್ ನವೆಂಬರ್ 9ಕ್ಕೆ ಬಿಡುಗಡೆ

ಮುಂಬೈ, ಅಕ್ಟೋಬರ್ 1: ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಚಿತ್ರ 'ಲಕ್ಷ್ಮಿ ಬಾಂಬ್' ನವೆಂಬರ್ 09 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ ಅಭಿನಯದ ಚಿತ್ರ ಲಕ್ಷ್ಮಿ ಬಾಂಬ್ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಅದರಲ್ಲಿ, ಅಕ್ಷಯ್ ಅವರ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ರಾಘವ್ ಲಾರೆನ್ಸ್ ನಿರ್ದೇಶನದ ಈ ಚಿತ್ರ 'ಲಕ್ಷ್ಮಿ ಬಾಂಬ್' ನವೆಂಬರ್ 09 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಈಗ ಚಿತ್ರಮಂದಿರಗಳಲ್ಲಿಯೂ ಬಿಡುಗಡೆಯಾಗಲಿದೆ. ಈ ಚಿತ್ರವು ನವೆಂಬರ್ 9 ರಂದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಎಇಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸೌತ್‌ನ ಸೂಪರ್ ಹಿಟ್ ಭಯಾನಕ ಚಿತ್ರ ಕಾಂಚನ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರವನ್ನು ಈದ್ ದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ -19 ಸ್ಫೋಟಗೊಂಡ ನಂತರ ಚಿತ್ರಮಂದಿರವನ್ನು ಮುಚ್ಚಿದ್ದರಿಂದ ಅದನ್ನು ಮುಂದೂಡಲಾಯಿತು.

  

ಸುದ್ದಿ ಓದಿ