ಕನಕರು ದಾಸ ಸಾಹಿತ್ಯದ ದಿಗ್ಗಜರು: ಮಡಿವಾಳರ
ಲೋಕದರ್ಶನ ವರದಿ
ಶಿಗ್ಗಾವಿ 12: ಭಕ್ತಿಯೊಂದೆ ಮುಕ್ತಿಗೆ ಮಾರ್ಗ ಎಂಬುದನ್ನು ಮನಗಂಡು ತನ್ನ ಜೀವನವನ್ನು ಹರಿಭಕ್ತಿಯಲ್ಲಿ ತೊಡಿಗಿಸಕೊಂಡ ಕನಕದಾಸರು ಕನ್ನಡ ದಾಸ ಸಾಹಿತ್ಯಲೋಕದ ದಿಗ್ಗಜರು ಎಂದು ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಮಡಿವಾಳರ ಹೇಳಿದರು.
ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ರಾಜ್ಕುಮಾರ್ ಸರ್ಕಲ್ನಲ್ಲಿ ಉತ್ಸವ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ನಡೆದ ಕನಕದಾಸರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿ ತಮ್ಮ ಸಾಂಸಾರಿಕ ಜೀವನದಿಂದ ವೈರಾಗ್ಯಕ್ಕೊಳಗಾಗಿ ಹರಿಭಕ್ತಿಯಲ್ಲಿ ತೊಡಗಿಸಿಕೊಂಡು ಸಮಾಜದ ಅಂಕು,ಡೊಂಕುಗಳನ್ನು ತಿದ್ದುವಲ್ಲಿ ಅವರು ವಹಿಸಿದ ಪಾತ್ರ ಸ್ಮರಣೀಯ ಎಂದು ಮಡಿವಾಳರ ತಿಳಿಸಿದರು.
ಕುಲ ಕುಲ ಎಂದು ಹೊಡೆದಾಡದರಿ,ನಿಮ್ಮ ಕುಲದ ನೆಲೆಯನ್ನೆದಾದರೂ ಬಲ್ಲಿರಾ.. ಎಂದು ಪ್ರಶ್ನಿಸಿ,ಅರ್ಥೇಸಿ ಸಮಾಜಕ್ಕೆ ಸಮಾನತೆಯ ಮಹತ್ವ ತಿಳಿಸಿದ ಕನಕರ ಆದರ್ಶಗಳು ಎಂದಿಗೂ ಪ್ರಸ್ತುತ ಎಂದು ಮುಖ್ಯ ಶಿಕ್ಷಕಿ ಅನುಪಮಾ ಹೆಬ್ಬಾರ್ ಹೇಳಿದರು. ರಾಜ್ಕುಮಾರ್ ಸರ್ಕಲ್ನಲ್ಲಿರುವ ಕನಕದಾಸರ ಶಿಲ್ಪಕ್ಕೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿದರು. ಶಿಕ್ಷಕ ಸುನೀತಾ ಜಿ.,ನಿಂಗರಾಜ ಮಾಗೋಡ್,ವಿದ್ಯಾರ್ಥಿ ಗಳು,ರಾಕ್ ಗಾಡರ್ನ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು