ಕಾಗವಾಡ

ಜುಗುಳ-ಖಿದ್ರಾಪುರ ಮಧ್ಯದ ಸೇತುವೆ ಬರುವ ವರ್ಷ ಸಂಚಾರಕ್ಕೆ ಸಿದ್ಧ

ಜುಗುಳ-ಖಿದ್ರಾಪುರ ಮಧ್ಯದ ಸೇತುವೆ ಬರುವ ವರ್ಷ ಸಂಚಾರಕ್ಕೆ ಸಿದ್ಧ

ಬೆಂಗಳೂರಿನ ಬಿ. ಶ್ರೀನಿವಾಸ್ ಕಂಪನಿಯ ಅಧಿಕಾರಿಗಳಾದ ದೊರೆಸ್ವಾಮಿ ಮಾಹಿತಿ: ಸೇತುವೆ ಕಾಮಗಾರಿ  ವೀಕ್ಷಣೆ 

ಕಾಗವಾಡ ; ಕಳೆದ ಅನೇಕ ವರ್ಷಗಳಿಂದ ಕೃಷ್ಣಾ ನದಿ ತೀರದ ಜುಗುಳ ಗ್ರಾಮದ ಜನರು ಚಾತಕ ಪಕ್ಷಿಯಂತೆ ಕಾಯುತ್ತಿರುವ ಜುಗುಳ-ಖಿದ್ರಾಪುರ ಮಧ್ಯದ ಸೇತುವೆ ಕಾಮಗಾರಿ ಭರದಿಂದ ಸಾಗುತಿದೆ. ಸುಮಾರು 20 ಕೋಟಿ ರು ವೆಚ್ಚದಲ್ಲಿ ಸೇತುವೆ ಕಾಮಗಾರಿ ನಿರ್ಮಾಣವಾಗುತ್ತಿದೆ. ಬರುವ ವರ್ಷದ ಮಳೆಗಾಲದಲ್ಲಿ ಸಂಚರಿಸಲು ಸಿದ್ಧವಾಗಲಿದೆ. ಎಂದು ಬೆಂಗಳೂರಿನ ಬಿ. ಶ್ರೀನಿವಾಸ್ ಕಂಪನಿಯ ಅಧಿಕಾರಿಗಳಾದ ದೊರೆಸ್ವಾಮಿ ಮಾಹಿತಿ ನೀಡಿದರು. 

ಶನಿವಾರ ದಿ. 30ರಂದು ಜುಗುಳ ಗ್ರಾಮದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗೆ ವೀಕ್ಷಿಸಿ ಅವರು ಮಾತನಾಡಿದರು. 

ಕಳೆದ ಅನೇಕ ವರ್ಷಗಳಿಂದ ಜುಗುಳ ಗ್ರಾಮದ ಗ್ರಾಮಸ್ಥರು ಪ್ರವಾಹದ ನೀರಿನ ಕಹಿ ಅನುಭವಗಳು ಕಂಡಿದ್ದಾರೆ. ನದಿಗೆ  ಸೇತುವೆ ನಿರ್ಮಿಸಬೇಕೆಂಬ ಕೂಗು ಕಳೆದ ಹಲವಾರು ವರ್ಷಗಳಿಂದ ಇತ್ತು. ಈ ಭಾಗದ ಜನರು ನದಿ ದಾಟಿ ಹೋಗಬೇಕಾದರೆ ದೋಣಿಯೊಂದೆ  ಸಾಧನವಾಗಿತ್ತು. ಇದನ್ನು ಮನಗಂಡು ವಾಹನ ಸಂಚಾರಕ್ಕೆ ಮಾರ್ಗ ನಿರ್ಮಿಸಲು  ಆಗಿನ ಸಂಸದ ಸದಸ್ಯ ಪ್ರಕಾಶ್ ಹುಕ್ಕೇರಿಯವರುವಿಶೇಷ ಪ್ರಯತ್ನ ಮಾಡಿ ನದಿಗೆ ಸೇತುವೆ ನಿರ್ಮಿಸುವ ಕಾಮಗಾರಿಗೆ ಮಂಜೂರಾತಿ ಪಡೆದುಕೊಂಡರು. ಕೃಷ್ಣಾ ನದಿಗೆ ಮೂರು ಸೇತುವೆಗಳು ನಿರ್ಮಿಸುವ ಯೋಜನೆಗ ಮಂಜೂರಾತಿ ಪಡೆದುಕೊಂಡಿದರು.  

ಪ್ರಕಾಶ್ ಹುಕ್ಕೇರಿ ಅವರಿಗೆ ಆಗಿನ ಕಾಗವಾಡ ಶಾಸಕ ರಾಜು ಕಾಗೆ, ಕುಡಚಿ ಶಾಸಕ ಪಿ.ರಾಜೀವ್ ಮತ್ತು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಸಾಥ ನೀಡಿದರು. 

ನದೀ ತೀರದ ಜುಗುಳ ಗ್ರಾಮದ ಜನರಿಗೆ ಸಂಚರಿಸಲು ಖಿದ್ರಾಪುರ - ಜುಗುಳ, ಚಿಂಚಲಿ - ಮುಳವಾಡ, ಉಗಾರ್‌-ಕುಡಚಿ ಈ ಮೂರು ಸೇತುವೆಗಳು ನಿರ್ಮಿಸಲು ಸನ್ 2018 ರಲ್ಲಿ ಮಂಜೂರಾತಿ ಪಡೆದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹಸ್ತದಿಂದ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜುಗುಳ - ಖಿದ್ರಾಪುರ ಮಧ್ಯದ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ  ನಿಗಮದಿಂದ 20 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದರು. ಮಧ್ಯದಲ್ಲಿ ಸೇತುವೆ ಅಂತರ 1 ಕಿಮಿ ಮಾತ್ರ ಇದೆ. ಆದರೆ ಖಿದ್ರಪೂರ್ ಗ್ರಾಮಕೆ ಹೋಗಲು 20 ಕಿಲೋಮೀಟರ್ ಸಂಚರಿಸ ಬೇಕಾಗುತ್ತಿತ್ತು. ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತಾಗುತ್ತಿತ್ತು ಎಂದು ಜುಗುಳ ಗ್ರಾಪಂ ಮಾಜಿ ಅಧ್ಯಕ್ಷ ಸಂಜಯ ಮಿನಚೆ ಹೇಳಿದರು. 

ಇದರಿಂದ ಜನರಿಗಾಗುವ ತೊಂದರೆಗಳು, ಆರ್ಥಿಕ ನಷ್ಟವಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ಪ್ರತಿವರ್ಷ ಗ್ರಾಮದಲ್ಲಿ ಪ್ರವಾಹದ ನೀರು ನುಗ್ಗುತ್ತಿದೆ. ಆಗ ಇಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಹರಸಹಾಸ ಪಡಬೇಕಾಗುತ್ತದೆ. ಸೇತುವೆ ನಿರ್ಮಾಣವಾದರೆ ಎರಡು ರಾಜ್ಯಗಳಿಗೆ ಸಂಪರ್ಕಿಸಲು ವಿಶೇಷ ಅನುಕೂಲವಾಗಲಿದೆ. ಇದನ್ನು ಅರಿತು ಪ್ರಕಾಶ್ ಹುಕ್ಕೇರಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. 

ಎರಡು ಸೇತುವೆಗಳು 2023 ಪೂರ್ಣಗೊಳ್ಳಲಿವೆ: -  

ಇದೇ ರೀತಿ ಮೊಳವಾಡ -ಚಿಂಚಲಿ ಮತ್ತು ಉಗಾರ್ -ಕುಡಚಿ ಮಧ್ಯದ ಕೃಷ್ಣಾ ನದಿಗೆ ಸೇತುವೆ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿವೆ..ಎರಡು ಸೇತುವೆಗಳು 2023 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಇಲಾಖೆ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳ್ಳಲಿದೆ. ಎಂದು ಹೇಳಿದರು. 

ಕಾಮಗಾರಿ ಶೇ.50ರಷ್ಟು ಪೂರ್ಣ: 

ಬೆಂಗಳೂರಿನ ಬಿ ಶ್ರೀನಿವಾಸ್ ಕಂಪನಿಯ ವಿಭಾಗಿ ವ್ಯವಸ್ಥಾಪಕ ದೊರಯಸ್ವಾಮಿ ಪತ್ರಿಕೆಗೆ  ಮಾಹಿತಿ  ನೀಡುವಾಗ 2018 ರಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ನದಿಯಲ್ಲಿ ನೀರು ಇರುವದರಿಂದ ಸ್ವಲ್ಪ ತೊಂದರೆಯಾಯಿತು. ಅಲ್ಲದೆ ಕಳೆದ ವರ್ಷ ಕೋರೊನಾದಿಂದ ಕಾಮಗಾರಿ 4 ತಿಂಗಳು ಸ್ಥಗಿತಗೊಂಡಿತ್ತು. ಈಗ ಸುಮಾರು ಶೇ. 50ಅರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬರುವ ವರ್ಷದ ಮಳೆಗಾಲವರೆಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಭರವಸೆ ನೀಡಿದರು. 

ಕಾಮಗಾರಿ ನಷ್ಟದಲ್ಲಿ: 

ಈ ಕಾಮಗಾರಿಗೆ ಮಂಜೂರಾತಿ  ನೀಡಿದಾಗ ಸೇತುವೆ ಕಾಮಗಾರಿಗೆ ಬಳಿಸುವ ಸ್ಟಿಲ್‌ ದರ ಒಂದು ಟನ್‌ಗೆ 35 ಸಾವಿರು ಇತು.್ತ ಈಗ 75 ಸಾವಿರ ಆಗಿದೆ. ಇದೇ ರೀತಿ ಇನ್ನುಳಿದ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ತೈಲ ಬೆಲೆ ಹೆಚ್ಚಿಸಿದ್ದರಿಂದ ಬೆಲೆಗಳು ಏರಿಕೆಯಾಗುತ್ತಿವೆ. ಸದ್ಯಕ್ಕೆ ಈ ಕಾಮಗಾರಿ ನಷ್ಟದಲ್ಲಿದೆ ಇದರೂ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಕಂಪನಿ ಹೊಂದಿದೆ ಎಂದು ಹೇಳಿದರು. 

ಅಧಿಕಾರಿ ಭೇಟಿ 

 ರಾಜ್ಯದ ರಸ್ತೆ ಅಭಿವೃದ್ಧಿ ನಿಗಮ ಕಾರ್ಯನಿರ್ವಾಹಕ ಅಭಿಯಂತರರಾದ ಪುರಂದರ ನದಿ ತೀರದಲ್ಲಿ ನಿರ್ಮಿಸುವ ಸೇತುವೆಗಳ ಕಾಮಗಾರಿ ಮಂಗಳವಾರ 26 ರಂದು ಪರೀಶೀಲನೆ ಮಾಡಿದ್ದಾರು. ಬರುವ ಮಳೆಗಾಲದ ವರಿಗೆ ಸೇತುವೆ ಪೂರ್ಣಗೊಳಿಸುವ ಭರವಸೆ ಜನರಿಗೆ ನೀಡಿದ್ದಾರೆ. 


ಸುದ್ದಿ ಓದಿ