ರಿಯಾ ಚಕ್ರವರ್ತಿ ಸೇರಿ ನಾಲ್ವರ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಮುಂಬೈ, ಸೆಪ್ಟೆಂಬರ್ 29: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಿಯಾ ಚಕ್ರವರ್ತಿ ಮತ್ತು ನಾಲ್ವರು ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಜಾಮೀನು ಅರ್ಜಿಯನ್ನು ವಿರೋಧಿಸಿದ ಎನ್‌ಸಿಬಿ ಪರ ವಕೀಲರು, ರಿಯಾ ವಿರುದ್ಧ ಹತ್ಯೆಗಿಂತ ಗಂಭೀರ ಆರೋಪಗಳಿವೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಒತ್ತಾಯಿಸಿದರು.
ಜೊತೆಗೆ, ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನಾತ್ಮಕ ದೃಷ್ಟಿಕೋನದಿಂದ ನೋಡಬೇಕು. ಇಲ್ಲಿಯವರೆಗೆ ಬಂಧಿತರಾಗಿರುವ ಪ್ರತಿಯೊಬ್ಬರೂ ಒಬ್ಬರಿಂದೊಬ್ಬರಿಗೆ ಸಂಪರ್ಕ ಹೊಂದಿದವರಾಗಿದ್ದಾರೆ ಎಂದರು.
ರಿಯಾ ಮತ್ತು ಸಹೋದರ ಶೌಹಿಕ್ ಪರ ವಕೀಲರು, ರಿಯಾ ಅವರು ಕೇವಲ ತಮ್ಮ ಪ್ರಿಯಕರನಿಗೆ ಡ್ರಗ್ ಪೂರೈಕೆ ಮಾಡಿದ್ದಾರೆ. ಆದ್ದರಿಂದ ಅವರು ವಿರುದ್ಧ ಎನ್‌ಡಿಪಿಎಸ್ ಸೆಕ್ಷನ್ 27ಎ ಜಾರಿಗೊಳಿಸಲಾಗದು ಎಂದು ವಾದಿಸಿದರು.