ಅಥಣಿ

ಶುಕ್ರವಾರ ಸಂತೆ ಬಂದ ಮಾಡಲು ಸ್ವತಃ ಪೀಲ್ಡಿಗಿಳಿದ ಗ್ರಾಪಂ ಆಡಳಿತ ಮಂಡಳಿ

ಶುಕ್ರವಾರ ಸಂತೆ ಬಂದ ಮಾಡಲು ಸ್ವತಃ ಪೀಲ್ಡಿಗಿಳಿದ ಗ್ರಾಪಂ ಆಡಳಿತ ಮಂಡಳಿ

ಅಥಣಿ23: ತಾಲೂಕಿನ ಸತ್ತಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ವಾರದ ಶುಕ್ರವಾರ ಸಂತೆ ನಡೆಯುತ್ತದೆ. ಈ ಸಂತೆಗೆ ಅಥಣಿ ತಾಲೂಕಿನ ವಿವಿಧ ಗ್ರಾಮಗಳ ಜನರು ಬರುತ್ತಾರೆ. ಆದರೇ ಕೋವಿಡ್ ರೂಪಾಂತರ ಮಾಹಾಮಾರಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವುದರಿಂದ ಶುಕ್ರವಾರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷರ, ಸರ್ವ ಸದಸ್ಯರ ಸಮ್ಮುಖದಲ್ಲಿ ತುರ್ತು ಸಭೆ ಕರೆದು ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಶುಕ್ರವಾರದ ಸಂತೆ ರದ್ದುಗೊಳಿಸುವ ಕುರಿತು ಚರ್ಚಿಸಿದರು.ನಂತರ ಗ್ರಾಮ ಪಂಚಾಯತ ಸಿಬ್ಬಂದಿ , ಸದಸ್ಯರು ಸ್ವತ ಸಂತೆ ಸೇರಿರುವ ಸ್ಥಳಕ್ಕೆ ತೆರಳಿ ವ್ಯಾಪಾರಿಗಳಿಗೆ ಮರಳಿ ತಮ್ಮ ಗ್ರಾಮಗಳಿಗೆ ತೆರಳುವಂತೆ ಒತ್ತಾಯಿಸಿದರು.  ನಂತರ ಗ್ರಾಮದ ತುಂಬೆಲ್ಲ ಸಂಚರಿಸಿ ಮಾಸ್ಕ ಇಲ್ಲದೆ ಓಡಾಡುತ್ತಿದ್ದ ಜನರನ್ನು ನಿಲ್ಲಿಸಿ ಅವರಿಗೆ ಸೂಚನೆ ನೀಡಿ ಮಾಸ್ಕ ಹಾಕಿಕೊಳ್ಳದ ವ್ಯಕ್ತಿಗೆ ದಂಡ ವಿಧಿಸುವ ಕುರಿತು ಹೇಳಿದರು. ನಂತರ ಸಾರ್ವಜನಿಕರು ತಮ್ಮ ಪಾಕೇಟೆಗಳಲ್ಲಿ ಇಟ್ಟುಕೊಂಡಿದ್ದ ಮಾಸ್ಕ್‍ಗಳನ್ನು ಹೊರ ತೆಗೆದು ಮುಖಕ್ಕೆ ಹಾಕಿ ಕೊಂಡರು.

ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವರಾಜ ಭಜರಂಗಿ ಮಾತನಾಡಿ ಕೊವಿಡ್ ಮಾಹಾಮಾರಿಯನ್ನು ಹೋಗಲಾಡಿಸಲು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಎಲ್ಲದಕ್ಕೂ ಸರ್ಕಾರದ ಕಡೆಗೆ ಬೆರಳು ಮಾಡುವುದು ಸರಿಯಲ್ಲ ಗ್ರಾಮಸ್ಥರು ಸ್ವಯಂ ಪ್ರಜ್ಞೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳೋಣ ಎಂದು ಹೇಳಿದ ಅವರು  ಗ್ರಾಮದ ಜನರಿಗೆ ಅನಗತ್ಯವಾಗಿ ಓಡಾಡದಂತೆ ಮನವಿ ಮಾಡಿದರು. 

ಗ್ರಾಮ ಪಂಚಾಯತ ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ದಳವಾಯಿ, ಪಿ.ಡಿ.ಒ ಬಿ.ಎಸ್. ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಆಯ್. ಎಸ್.  ನಿಂಗವ್ವಗೋಳ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲಪ್ಪ ಹಂಚಿನಾಳ, ವಸಂತ ಸೋಲಂಕರ, ಸಂಜೀವ ಖಾನಗೌಡ, ವಿವೇಕ ಮಠದ,  ವiಹಾಂತೇಶ ಗಂಜಾಳಿ, ದುಂಡಯ್ಯ ಮಠಪತಿ, ಮಹಾಂತೇಶ ಗುಡ್ಡಾಪುರ, ಅಣ್ಣಪ್ಪ ರುದ್ರಗೌಡರ, ರಾಕೇಶ ಪಾಟೀಲ, ಸಂಜೀವ ಜಮಖಂಡಿ, ಮಹಾದೇವ ದಳವಾಯಿ  ಹಾಗೂ  ಗ್ರಾಮ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು. 

ಶುಕ್ರವಾರ ಸಂತೆ ರದ್ದು :  ಗ್ರಾಮದಲ್ಲಿ ಪ್ರತಿ ಶುಕ್ರವಾರ ಜರಗುವ ಸಂತೆಯನ್ನು ಸರ್ಕಾರದ ಮುಂದಿನ ಆದೇಶದ ವರೆಗೂ ಬಂದ ಮಾಡುಬ ನಿರ್ಣಯ ಕೈಗೊಂಡರು. ಮುಂದಿನ ಶುಕ್ರವಾರ ನಿಗದಿತ ಸಮಯದಲ್ಲಿ ಕಾಯಿಪಲ್ಲೆಯನ್ನು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡುವಂತೆ ಹೇಳಿದರು. ಕಾಯಿಪಲ್ಲೆ ಹೊರತು ಪಡಿಸಿ ಉಳಿದ ವ್ಯಾಪಾರಿಗಳು ಬರದಂತೆ ಸೂಚನೆ ನೀಡಿದರು. ಸತ್ತಿ ಗ್ರಾಮದಲ್ಲಿ  ಶುಕ್ರವಾರ ಸಂತೆಯನ್ನು ಗ್ರಾಮ ಪಂಚಾಯತ ಸದಸ್ಯರು ರದ್ದುಗೊಳಿಸಿ ವ್ಯಾಪಾರಿಗಳಿಗೆ ತಮ್ಮ ಗ್ರಾಮಗಳಿಗೆ ತೆರಳುವಂತೆ ಧ್ವನಿ ವರ್ಧಕ ಬಳಸಿ ಮನವಿ ಮಾಡಿದರು.

ಸುದ್ದಿ ಓದಿ