ಉಚಿತ ನೇತ್ರ ತಪಾಸಣೆ ಶಿಬಿರ
ಕಾಗವಾಡ 13: ಪಟ್ಟಣದ ಸುಖಕರ್ತಾ ಸಾರ್ವಜನಿಕ ಗಣೇಶ ಉತ್ಸವ ಮಂಡಳ ಮತ್ತು ಸದ್ಗುರು ಕ್ಲಿನಿಕ್ ಇವರ ನೇತೃತ್ವದಲ್ಲಿ ಮಿರಜನ ನಾಬ್ ನೇತ್ರ ಆಸ್ಪತ್ರೆಯ ಸಹಯೋಗದೊಂದಿಗೆ ಗಣೇಶೋತ್ಸವದ ನಿಮಿತ್ತ ಶುಕ್ರವಾರ ದಿ. 13 ರಂದು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 200 ಕ್ಕೂ ಹೆಚ್ಚು ಜನರು ಈ ಶಿಬಿರದಲ್ಲಿ ನೇತ್ರ ಚಿಕಿತ್ಸೆ ಮಾಡಿಸಿಕೊಂಡರು.
ಡಾ. ಚಂದ್ರೀಕಾ ಸತೀಶ ವಾಘಮೋರೆ ಇವರ ಬಸವನಗರದ ಸದ್ಗುರು ಕ್ಲಿನಿಕ್ನಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಗಳ ವರಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಗಣೇಶ ಮಂಡಳದ ಹಿರಿಯ ಸದಸ್ಯರಾದ ವೇಳ ಶಂಕರ ನಾಯಿಕ ಮಾತನಾಡಿ, ಡಾ. ಚಂದ್ರೀಕಾ ವಾಘಮೋಡೆ ಇವರ ನೇತೃತ್ವದಲ್ಲಿ ಮಿರಜ್ನ ನಾಬ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸೆ ಹಮ್ಮಿಕೊಂಡಿದ್ದು, ಸುಮಾರು 200 ಕ್ಕೂ ಹೆಚ್ಚು ಜನರು ಈ ಶಿಬಿರದಲ್ಲಿ ನೇತ್ರೆ ತಪಾಸನೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ಅವಶ್ಯಕತೆ ಇದ್ದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗುವುದು ಎಂದರು.
ಈ ಸಮಯದಲ್ಲಿ ಅಶೋಕ ಚನ್ನವೀರ, ಶಂಕರ ನಾಯಿಕ, ಭೀಮು ಕುರಣೆ, ಮಾರುತಿ ಖಾನಾಯಿ, ವಿಕ್ರಂ ಅವಳೇಕರ, ಸಚೀನ ಪಾಟೀಲ, ಜಗದೀಶ ಮಧಬಾಂವಿಕರ, ಭೀಮರಾವ ಖಾನಾಯಿ, ಸಾಗರ ಸೂರ್ಯವಂಶಿ, ಪಾಂಡುರಂಗ ಖಾನಾಯಿ, ಪಿಂಟು ಮಗದುಮ್, ರಮೇಶ ಇಟ್ನಾಳ, ಸಚೀನ ನಾಯಿಕ, ಮಹೇಶ ಪಾಟೀಲ, ಸತೀಶ ವಾಘಮೋರೆ, ಸುನೀಲ ವಾಘಮೋರೆ, ಸಂಜಯ ಪರೀಟ ಸೇರಿದಂತೆ ಸುಖಕರ್ತಾ ಗಣೇಶ ಉತ್ಸವ ಮಂಡಳದ ಸದಸ್ಯರು, ನಾಬ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.