ತಂಗಭದ್ರ ನದೀನೀರು ಹೆಚ್ಚಳ, ಯಾವುದೇ ಮುನ್ನಚ್ಚರಿಕೆಯ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತ ರವೀಂದ್ರಗೌಡ ಆಕ್ರೋಶ
ರಾಣೇಬೆನ್ನೂರು 17: ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ತುಂಗಭದ್ರ ನದಿ ಏಕಾಎಕಿ ತುಂಬಿ ಹರಿಯುತ್ತಿದೆ. ಹಾವೇರಿ ಜಿಲ್ಲಾಡಳಿತ ಈ ಬಗ್ಗೆ ಜಿಲ್ಲೆಯ ನದಿ ತೀರದ ಪ್ರದೇಶ ಜನರಿಗೆ ಯಾವುದೇ ಮುನ್ನಚ್ಚರಿಕೆ ನೀಡದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳನ್ನು ಮೇಲೆತ್ತಲು ಸಾಧ್ಯವಾಗಿರುವುದಿಲ್ಲ.
ಏಕೆಂದರೆ ಹಾವೇರಿ ಜಿಲ್ಲೆಯಲ್ಲಿ ಬರೀ ಜಿನುಗು ಮಳೆ ಬಿಟ್ಟರೆ ದೊಡ್ಡ ಮಳೆ ಬಂದಿರುವುದಿಲ್ಲ. ಹೀಗಾಗಿ ರೈತರು ಎಲ್ಲವನ್ನು ಮರೆತು ಕೃಷಿ ಚಟುವಟಿಯಲ್ಲಿ ತಲ್ಲೀನರಾಗಿದ್ದರು. ಈಗ ಏಕಾಎಕಿ ತುಂಗಭದ್ರ ನದಿ ನೀರು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದ ಕೃಷಿ ಪಂಪ್‌ಸೆಟ್ ಸೇರಿದಂತೆ ಇತರೆ ಕೃಷಿ ಚುಟವಟಿಕೆಯ ಸಾಮಾಗ್ರಿಗಳು, ಪೈಪ್‌ಗಳು, ವಾಯರ್‌ಗಳು ನೀರುಪಾಲಾಗಿವೆ. ಕಳೆದ ಭಾರಿಯ ಅನಾವೃಷ್ಟಿ, ಬೆಳೆನಷ್ಟ ಬೆಳೆಪರಿಹಾರ, ಬೆಳೆವಿಮೆಗಳು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತಾಪಿ ವರ್ಗ ವಿಲಿವಿಲಿ ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯತನ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ.