ಗುಳೇದಗುಡ್ಡಕ್ಕೆ ಜವಳಿ ಪಾರ್ಕ್ : ಅಧಿಕಾರಿಗಳಿಂದ ಸ್ಥಳ ಪರೀಶೀಲನೆ
ಗುಳೇದಗುಡ್ಡ 07 : ಪ್ರಸಕ್ರ ಬಜೆಟ್ನಲ್ಲಿ ಗುಳೆದಗುಡ್ಡ ನಗರಕ್ಕೆ ಜವಳಿಪಾರ್ಕ್ ಮಂಜೂರಾದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಬುಧವಾರ ಜಿಲ್ಲಾ ಜವಳಿ ಇಲಾಖೆ ಅಧಿಕಾರಿಗಳು ಬಂದು ಅಗತ್ಯವಾಗಿರುವ ಜಮೀನಿಗಾಗಿ ಸ್ಥಳ ಪರಿಸೀಲನೆ ಮಾಡಿದರು.
ಬಾಗಲಕೋಟೆ ರಸ್ತೆಗಿರುವ ಹೆಸ್ಕಾಂ ಕಚೇರಿ ಹತ್ತಿರದ ಗುಡ್ಡಕ್ಕೆ ಹೊಂದಿಕೊಂಡಂತೆ ಇರುವ 14 ಎಕರೆ ಜಮೀನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜವಳಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ಕೊಣ್ಣೂರ, ಸೋಮಶೇಖರ ಮಿಣಜಗಿ, ಕಾಂಗ್ರೇಸ್ ಮುಖಂಡರಾದ ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಮಾಜಿ ಪುರಸಭೆ ಅಧ್ಯಕ್ಷ ನಾಗಪ್ಪ ಗೌಡರ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ವಿಠ್ಠಲ ಕಾವಡೆ, ಶಾಮ ಮೇಡಿ, ಪ್ರವೀಣ ಪವಾರ, ರಮೆಶ ಅಗಸಿಮನಿ, ಬಾಬು ಬೋಂಬಲೇಕರ್ ಸೇರಿದಂತೆ ಇತರರು ಇದ್ದರು.