ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿ ಸಭೆ
ಇಂಡಿ23: ಪಟ್ಟಣದ ದಾನೇಶ್ವರಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿದ ದಾನಮ್ಮದೇವಿಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಅ. 7ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು ತಿಳಿಸಿದ್ದಾರೆ.
ಅವರು ಗುರುವಾರ ಪಟ್ಟಣದ ದಾನೇಶ್ವರಿ ಕಾಲೋನಿಯಲ್ಲಿ ದಾನಮ್ಮದೇವಿ ಸಮಿತಿಯಿಂದ ನಿರ್ಮಾಣಗೊಂಡ ನೂತನ ದೇವಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಕೊರೋನಾ ಮಹಮಾರಿಯಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಧರ್ಮಸಭೆ ನಡೆದಿಲ್ಲ. ಯುವ ಜನಾಂಗ ಉದ್ಧಾರವಾಗಬೇಕಾದರೆ ಪ್ರತೀ ವಾರ ಅಥವಾ ತಿಂಗಳಿಗೊಮ್ಮೆಯಾದರೂ ಧರ್ಮಸಭೆ ಏರಿ್ಡಸಿ ಧರ್ಮದ ಭೋದನೆ ಮಾಡಬೇಕು. ಈಗ ಅಕ್ಟೋಬರ್ 7 ರಿಂದ 20 ರವೆರೆಗೆ ವಿವಿಧ ಕಾರ್ಯಕ್ರಮ ಮತ್ತು ಪ್ರತಿದಿನ ಪುರಾಣ ಏರಿ್ಡಸಿದ್ದು ಮನುಷ್ಯನ ಮನಸ್ಸಿನಲ್ಲಿನ ಕೆಟ್ಟ ಭಾವನೆಗಳನ್ನು ಹೋಗಲಾಡಿಸಲು ಅನುಕೂಲವಾಗುತ್ತದೆ ಎಂದರು.
ಪಟ್ಟಣದ ಹಿರಿಯ ಉಧ್ಯಮಿ ಸಿದ್ರಾಮಪ್ಪ ದೇಸಾಯಿ ಮಾತನಾಡಿ ಅ. 7 ರಿಂದ 20 ರ ವರೆಗೆ ಪ್ರತಿದಿನ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ. 7 ರಂದು ಪುರಾಣ ಮಹೋತ್ಸವಕ್ಕೆ ಚಾಲನೆ, ವೈದಿಕತ್ವ ಬರಡೋಲ ಶಾಸ್ತ್ರೀ ವಿಶ್ವನಾಥ ಹಿರೇಮಠ ಇವರಿಂದ ಮತ್ತು ಪುರಾಣ ಪಂಡಿತ ಕಲ್ಲಯ್ಯ ಶಾಸ್ತ್ರೀಗಳಿಂದ ಪುರಾಣಕ್ಕೆ ಚಾಲನೆ, ಅ. 15 ರಂದು ವಿಜಯದಶಮಿ ದಿವಸ ಬೆಳಗ್ಗೆ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಧ್ಯಾನ್ಹ 12 ಗಂಟೆಗೆ ಬಾಲ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅ. 20 ರಂದು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕಳಸಾಹರೋಹಣ, ಶಾಂತೇಶ್ವರ ಗುಡಿಯಿಂದ ಮೆರವಣೆಗೆ , ನಂತರ ಧರ್ಮಸಭೆ ನಡೆಯುವದು ಎಂದು ತಿಳಿಸಿದರು.
ಹಿರಿಯರಾದ ಕಾಸುಗೌಡ ಬಿರಾದಾರ ಮಾತನಾಡಿ ಧರ್ಮ ಸಭೆಗೆ ಇಂಡಿ ತಾಲೂಕಿನ ಎಲ್ಲ ಮಠಾಧೀಶರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಕೊಪ್ಪಳದ ಗವಿ ಸಿದ್ಧೇಶ್ವರ ಮಠದ ಪೂಜ್ಯರು, ಶ್ರೀಶೈಲ ಜಗದ್ಗುರುಗಳು, ಬೀದರಿನ ಶಿವಕುಮಾರ ಶ್ರೀಗಳು ಆಗಮಿಸುವರು ಎಂದು ತಿಳಿಸಿದರು.
ದೇವಸ್ಥಾನಕ್ಕೆ ಅನೀಲ ಪ್ರಸಾದ ಏಳಗಿಯವರು ಮೂರು ಪ್ಲಾಟಗಳನ್ನು ಮತ್ತು ಶಿವಾನಂದ ತಾಂಬೆ ವರು ಒಂದು ಪ್ಲಾಟು ದಾನರೂಪದಲ್ಲಿ ನೀಡಿರುತ್ತಾರೆ. ಅದಲ್ಲದೆ ದೇವಸ್ಥಾನದ ಸಮಿತಿಯವರೇ ಎಲ್ಲ ಖರ್ಚನ್ನು ಮಾಡಿದ್ದಾರೆ. ಮತ್ತು ಮುಂದಿನ ಖರ್ಚನ್ನು ಸಮಿತಿಯವರೇ ಮಾಡುವರು ಎಂದು ತಿಳಿಸಿದರು.
ಅನೀಲಪ್ರಸಾದ ಏಳಗಿ ಮತ್ತು ಅನೀಲಗೌಡ ಬಿರಾದಾರ, ಪ್ರಕಾಶ ಕೊಳುರಗಿ ಮಾತನಾಡಿದರು.
ದೇವಸ್ಥಾನ ಸಮಿತಿಯ ಡಾ. ಎಂ.ಜಿ.ಪಾಟೀಲ, ಡಾಽಽ ಮಲ್ಲಿಕಾರ್ಜುನ ಬಿರಾದಾರ, ಸಂಗಮೇಶ ಕಕ್ಕಳಮೇಲಿ, ಅರವಿಂದ ಹಂಜಗಿ, ಶೈಲೇಶ ಬೀಳಗಿ, ರಾಜಶೇಖರ ಪೂಜಾರಿ, ಪ್ರಶಾಂತ ಬಿರಾದಾರ ಮತ್ತಿತರಿದ್ದರು.