ಸಿದ್ಧೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗೆ ತಹಶೀಲ್ದಾರ ಪ್ರಮೀಳಾ ಚಾಲನೆ
ಕಾಗವಾಡ 05: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡೀ ರಾಜ್ಯಾದ್ಯಂತ ಬೇರೆ-ಬೇರೆ ವಿಭಾಗದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ಐನಾಪೂರ ಕೆರೆಗಾಗಿ 18 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಇನ್ನೂ ಬೇಕಾದ ಅನುದಾನಕ್ಕಾಗಿ ಸಚಿವ ಶ್ರೀಮಂತ ಪಾಟೀಲರಿಂದ ಅನುದಾನ ಮಂಜೂರುಗೊಳಿಸಲು ನಾನು ವಿನಂತಿಸುತ್ತೇನೆ ಎಂದು ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಹೇಳಿದರು.
ಕಾಗವಾಡ ತಾಲೂಕಿನ ಐನಾಪೂರದ ಸಿದ್ಧೇಶ್ವರ ಕೆರೆ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 18 ಲಕ್ಷ ರೂ. ವೆಚ್ಚದಲ್ಲಿ 289ನೇ “ಮಾದರಿ ನಮ್ಮೂರು ನಮ್ಮ ಕೆರೆ” ಅಭಿವೃದ್ಧಿ ಕಾಮಗಾರಿಗೆ ಬಸವೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಶುಕ್ರವಾರರಂದು ಕಾಗವಾಡ ತಾಲೂಕಿನ ಐನಾಪೂರದ ಗ್ರಾಮದೇವತೆ ಸಿದ್ಧೇಶ್ವರ ಮಂದಿರದ ಹತ್ತಿರದ ಸಿದ್ಧೇಶ್ವರ ಕೆರೆ ಅಭಿವೃದ್ಧಿಗಾಗಿ ಪದ್ಮಭೂಷಣ, ಕರ್ನಾಟಕ ರತ್ನ ಡಾ. ವೀರೇಂದ್ರಜಿ ಹೆಗ್ಡೆ ಮತ್ತು ಮಾತೋಶ್ರೀ ಹೇಮಾವತಿ ಹೆಗ್ಡೆ ಇವರ ಶುಭ ಆಶೀರ್ವಾದದಿಂದ ಐನಾಪೂರದಲ್ಲಿ ಅನೇಕ ವರ್ಷಗಳಿಂದ ಬರಡಾಗಿ ಉಳಿದಿರುವ ಸಿದ್ಧೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬೆಳಿಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘದ ಕಾರ್ಯಕರ್ತರು ಜಲಕುಂಭ ತೆಗೆದುಕೊಂಡು ಸ್ಥಳಕ್ಕೆ ಆಗಮಿಸಿದರು.
ಚಿಕ್ಕೋಡಿ ವಿಭಾಗದ ನಿರ್ದೇಶಕ ಕೃಷ್ಣಾ ಟಿ.,ಸಿದ್ಧೇಶ್ವರ ಕೆರೆ ಸಮೀತಿ ಉಪಾಧ್ಯಕ್ಷ ರಾಜುಗೌಡ ಪಾಟೀಲ ಮಾತನಾಡಿದರು.
ಐನಾಪೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿಗಳು ಆಶೀರ್ವದಿಸಿದರು. ಪಟ್ಟಣ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಸದಸ್ಯ ರವೀಂದ್ರ ಗಾಣಿಗೇರ ಮಾತನಾಡಿ, ಅಭಿವೃದ್ಧಿ ಕಾಮಗಾರಿಗೆ ಒಂದಾಗಿ ಸಹಕರಿಸೋಣ ಎಂದರು.
ಮಂತ್ರೋಪಚಾರಗಾಳಿಂದ ಸ್ಥಳ ಶುದ್ಧಿಕರಣಗೊಳಿಸಿ ಐನಾಪೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರು ಉದ್ಘಾಟಿಸಿದರು. ಅಧ್ಯಕ್ಷತೆ ಸಿದ್ಧೇಶ್ವರ ಕೆರೆ ಸಮಿತಿ ಅಧ್ಯಕ್ಷ ಸುಭಾಶ ಪಾಟೀಲ ಇವರು ಅಧ್ಯಕ್ಷತೆ ವಹಿಸಿ ವಿಧಿವತ ಪೂಜೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಚಿಕ್ಕೋಡಿ ವಿಭಾಗದ ನಿರ್ದೇಶಕ ಕೃಷ್ಣಾ ಟಿ., ಐನಾಪೂರ ಪಟ್ಟಣ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಕೆರೆ ಸಮೀತಿ ಉಪಾಧ್ಯಕ್ಷ ರಾಜುಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಗಾಣಿಗೇರ, ಭಿಮ್ಮಪ್ಪ ಭೀರಡಿ, ಸಂಜೀವ ಭಿರಡಿ, ಬಾಹುಬಲಿ ಕುಸನಾಳೆ, ಸುಭಾಷ ಪಾಟೀಲ, ರವೀಂದ್ರ ಗಾಣಿಗೇರ ಉಪಸ್ಥಿತರಿದ್ದರು. ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಸ್.ಬಿ.ಸಂಜೀವಕುಮಾರ, ಕೃಷಿ ಮೇಲ್ವಿಚಾರಕರು ನಿರೂಪಿಸಿದರು. ಅಥಣಿ ತಾಲೂಕಾ ಯೋಜನಾಧಿಕಾರಿ ರಾಜು ನಾಯಿಕ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ರಾಮದಾಸಗೌಡ, ಅಂಜನಾ ಬಿರಣಗಿ, ಅಶ್ವೀನಿ ಮಾನೆ, ಅಮಗೊಂಡಾ ವಡೆಯರ, ಸುರೇಶ ಅಡಿಶೇರಿ, ಅಣ್ಣಾಸಾಬ ಡೂಗನವರ, ಭಿಮ್ಮಣ್ಣ ಭಿರಡಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.